ಕೋಲ್ಕತ್ತಾ ವಿರುದ್ಧ ಹೀನಾಯ ಸೋಲು ಕಂಡ ರಾಯಲ್ ಚಾಲೆಂಜರ್ಸ್

0

ಬೆಂಗಳೂರು: ಕಳಪೆ ಫೀಲ್ಡಿಂಗ್‌, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಸೋಲನ್ನು ಅನುಭವಿಸಿದೆ.

21 ರನ್‌ಗಳಿಂದ ಗೆದ್ದ ಕೋಲ್ಕತ್ತಾ ಈ ಆವೃತ್ತಿಯಲ್ಲಿ ಮೂರನೇ ಜಯವನ್ನು ದಾಖಲಿಸಿತು.

ಗೆಲ್ಲಲು 201 ರನ್‌ಗಳ ಕಠಿಣ ಗುರಿಯನ್ನು ಪಡೆದ ಬೆಂಗಳೂರು ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 179 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಆವೃತ್ತಿಯಲ್ಲಿ ತಾನು ಆರ್‌ಸಿಬಿ ವಿರುದ್ಧ ಆಡಿದ ಎರಡು ಪಂದ್ಯಗಳನ್ನು ಕೋಲ್ಕತ್ತಾ ಗೆದ್ದಿರುವುದು ವಿಶೇಷ. ಇನ್ನಿಂಗ್ಸ್‌ ಆರಂಭಿಸಿದ ಕೊಹ್ಲಿ (Virat Kohli) ಮತ್ತು ಫಾಫ್‌ ಡು ಪ್ಲೆಸಿಸ್‌ ಆರಂಭದಿಂದಲೇ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು. ಆದರೆ ಡುಪ್ಲೆಸಿಸ್‌ ಬಲವಾದ ಹೊಡೆತ ಹೊಡೆಯಲು ಹೋಗಿ 17 ರನ್‌(7 ಎಸೆತ, 1 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು. ನಂತರ ಬಂದ ಶಾಬಾಜ್‌ ಅಹ್ಮದ್‌ 2 ರನ್‌, ಮ್ಯಾಕ್ಸ್‌ವೆಲ್‌ 5 ರನ್‌ ಗಳಿಸಿ ಔಟಾದರು.

About Author

Leave a Reply

Your email address will not be published. Required fields are marked *

You may have missed