ಮಾಜಿ ಕ್ಯಾಪ್ಟನ್ ಧೋನಿ ಶಾಲೆಗೆ ಶಾಕ್ ಕೊಟ್ಟ ಕರ್ನಾಟಕ ಶಿಕ್ಷಣ ಇಲಾಖೆ

0

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ(MS Dhoni) ಮಕ್ಕಳ ಕಲಿಕೆಗಾಗಿ ಬೆಂಗಳೂರಿನಲ್ಲಿ ಗ್ಲೋಬಲ್ ಸ್ಕೂಲ್(MS Dhoni Global School) ಆರಂಭಿಸಿದ್ದು ಎಂಎಸ್ ಧೋನಿ ಶಾಲೆಗೂ ಶಿಕ್ಷಣ ಇಲಾಖೆ(Karnataka Education Department) ಶಾಕ್ ಕೊಟ್ಟಿದೆ.

ಎಂಎಸ್ ಧೋನಿ ಶಾಲೆ ರಾಜ್ಯ ಪಠ್ಯಕ್ರಮದಡಿ ಅನುಮತಿ ಪಡೆದಿದೆ. ಆದ್ರೆ ಸಿಬಿಎಸ್‌ಇ ಹಾಗೂ ಇತರೆ ಪಠ್ಯ ಬೋಧನೆ ಹಿನ್ನಲೆ ಎಂಎಸ್ ಧೋನಿ ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ಖ್ಯಾತ ಕ್ರಿಕೆಟಿಗ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿರುವ ಧೋನಿ ಶಾಲೆಗೂ ಶಿಕ್ಷಣ ಇಲಾಖೆ ಶಾಕ್ ಕೊಟ್ಟಿದೆ. ನಗರದ ಆರ್ಕಿಡ್ ಶಾಲೆ ಜೊತೆಗೆ ಎಂಎಸ್ ಧೋನಿ ಶಾಲೆಗೂ ನೋಟಿಸ್ ನೀಡಲಾಗಿದೆ. ಕಳೆದ ವರ್ಷವಷ್ಟೇ ಅಂದರೆ 2021-22 ರಲ್ಲಿ ಸಿಂಗಸಂದ್ರದಲ್ಲಿ ಎಂಎಸ್ ಧೋನಿಯವರ ಶಾಲೆ ಆರಂಭವಾಗಿತ್ತು. ಆದರೆ ಸಿಬಿಎಸ್‌ಇ ಸೇರಿದಂತೆ ಇತರೆ ಕೆಲ ಪಠ್ಯಕ್ರಮ ಬೋಧನೆ ಹಿನ್ನಲೆ ಶಾಲೆಗೆ ನೋಟಿಸ್ ನೀಡಲಾಗಿದೆ.

ಆರ್ಕಿಡ್ ಶಾಲೆ, ಎಂಎಸ್ ಧೋನಿ ಶಾಲೆಗೆ ನೋಟಿಸ್

ಎಂಎಸ್ ಧೋನಿ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದು ಪ್ರಸಕ್ತ ವರ್ಷ ಶಾಲೆಯಲ್ಲಿ 248 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಅನಧಿಕೃತ ಪಠ್ಯ ಬೋಧನೆಯಡಿ ಶಾಲೆಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ 8 ಅನಧಿಕೃತ ಆರ್ಕಿಡ್ ಶಾಲೆಗೆ ಶಿಕ್ಷಣ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ. ಈಗ ಎಂಎಸ್ ಧೋನಿ ಶಾಲೆ ಕೂಡ ಇದೇ ಪಟ್ಟಿಯಲ್ಲಿ ಸೇರಿಕೊಂಡಿದೆ.

ಸಿಬಿಎಸ್‌ಇ ಶಾಲೆ ಎಂದು ಪಬ್ಲಿಕ್ ಪರೀಕ್ಷೆ ಬರೆಸಲು ಮುಂದಾಗಿದ್ದ ಆರ್ಕಿಡ್

ಸಿಬಿಎಸ್‌ಇ ಶಾಲೆ ಎಂದು ಹೇಳಿಕೊಂಡು ಆರ್ಕಿಡ್ ಶಾಲೆ ಆಡಳಿತ ಮಂಡಳಿ ಪೋಷಕರಿಂದ ಲಕ್ಷ ಲಕ್ಷ ಫೀಸ್ ವಸೂಲಿ ಮಾಡಿದೆ. ಆದ್ರೆ ಸಿಬಿಎಸ್‌ಇ ಪರೀಕ್ಷೆ ಬಿಟ್ಟು ಸ್ಟೇಟ್ ಸಿಲಬಸ್ ಪಾಠ ಮಾಡಲಾಗಿದೆ. ಹಾಗೂ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆಗೆ ತಯಾರಿ ಮಾಡಲಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದ್ದು ಈ ವೇಳೆ ಆರ್ಕಿಡ್ ಸಿಬಿಎಸ್‌ಇ ಶಾಲೆಗಳ ಅಡಿಯಲ್ಲಿ ರಿಜಿಸ್ಟರ್ ಆಗದಿರುವುದು ಬಯಲಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ನೋಟಿಸ್ ಕಳಿಸಿದೆ. ಬೆಂಗಳೂರಿನ 8 ಆರ್ಕಿಡ್ ಶಾಲೆಗೆಗಳಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಬೆಂಗಳೂರು ಉತ್ತರ ಜಿಲ್ಲೆಯ ಹೋನ್ನೆನಹಳ್ಳಿಯಲ್ಲಿರು ಆರ್ಕಿಡ್ ಶಾಲೆ, ಮೈಸೂರು ರಸ್ತೆ, ನಾಗರಭಾವಿ, ಪಣತೂರು, ಹೊಮ್ಮದೇವನಹಳ್ಳಿ ಹರಳೂರು, ಮಹಾಲಕ್ಷ್ಮಿ ಲೇಔಟ್, ಹೊರಮಾವು ಭಾಗದಲ್ಲಿರು ಆರ್ಕಿಡ್ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.

About Author

Leave a Reply

Your email address will not be published. Required fields are marked *

You may have missed