ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ ಜರ್ಮನಿ, ಕೊರಿಯಾ

0

ಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ಗೆ ಜರ್ಮನಿ ಹಾಗೂ ಏಷ್ಯಾ ಚಾಂಪಿಯನ್‌ ಕೊರಿಯಾ ಲಗ್ಗೆಯಿಟ್ಟಿವೆ. ಇದರೊಂದಿಗೆ ಅಂತಿಮ 8ರ ಸುತ್ತಿನ ವೇಳಾಪಟ್ಟಿಅಂತಿಮಗೊಂಡಿದೆ. ನಡೆದ ಕ್ರಾಸ್‌ ಓವರ್‌ ಪಂದ್ಯದಲ್ಲಿ ಜರ್ಮನಿ 5-1 ಗೋಲುಗಳಲ್ಲಿ ಫ್ರಾನ್ಸ್‌ ವಿರುದ್ಧ ಸುಲಭ ಜಯ ಸಾಧಿಸಿತು.

ಮೊದಲ 24 ನಿಮಿಷಗಳಲ್ಲೇ 4 ಗೋಲು ಬಾರಿಸಿದ ಜರ್ಮನಿ,

ಫ್ರಾನ್ಸ್‌ಗೆ ಪುಟಿದೇಳಲು ಅವಕಾಶ ನೀಡಲಿಲ್ಲ. ಆಕ್ರಮಣಕಾರಿ ಆಟದ ಜೊತೆ ಅತ್ಯುತ್ತಮ ರಕ್ಷಣಾತ್ಮಕ ಆಟವನ್ನೂ ಪ್ರದರ್ಶಿಸಿದ ಜರ್ಮನಿ ಎಲ್ಲಾ ಹಂತಗಳಲ್ಲೂ ಮೇಲುಗೈ ಸಾಧಿಸಿತು. 57ನೇ ನಿಮಿಷದಲ್ಲಿ ಫ್ರಾನ್ಸ್‌ ಪೆನಾಲ್ಟಿಕಾರ್ನರ್‌ ಮೂಲಕ ಖಾತೆ ತೆರೆದು ಸೋಲಿನ ಅಂತರ ತಗ್ಗಿಸಿಕೊಳ್ಳುವ ಪ್ರಯತ್ನ ನಡೆಸಿತು. ಆದರೆ 59ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಕಾರ್ನರ್‌ ಅನ್ನು ಉಪಯೋಗಿಸಿಕೊಂಡ ಜರ್ಮನಿ ತನ್ನ ಖಾತೆಗೆ ಮತ್ತೊಂದು ಗೋಲು ಸೇರ್ಪಡೆ ಮಾಡಿಕೊಂಡಿತು.

About Author

Leave a Reply

Your email address will not be published. Required fields are marked *

You may have missed