ಭಾರಿ ಮಳೆಯಿಂದಾಗಿ ಚಿನ್ನದ ಗಣಿ ಕುಸಿದು 15 ಕಾರ್ಮಿಕರು ನಿಧನ

0

ಕೇಪ್‌ಟೌನ್: ಪೂರ್ವ ಆಫ್ರಿಕಾದ ಬುರುಂಡಿಯಲ್ಲಿ ಚಿನ್ನದ ಗಣಿ ಕುಸಿದು ಹದಿನೈದು ಕಾರ್ಮಿಕರು ಮೃತಪಟ್ಟಿರುವ ಘಟನೆ ಸಿಬಿಟೋಕ್ ಪ್ರಾಂತ್ಯದ ಮಾಬಾಯಿ ಕಮ್ಯೂನ್‌ನಲ್ಲಿ ನಡೆದಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಚಿನ್ನದ ಗಣಿಯಲ್ಲಿ ಸಾಕಷ್ಟು ನೀರು ತುಂಬಿಕೊಂಡಿತ್ತು.

ಈ ವೇಳೆ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗಣಿ ಕುಸಿದು ಪ್ರವಾಹ ಉಂಟಾಗಿ 15 ಮಂದಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಮಳೆಯ ಕಾರಣದಿಂದಾಗಿ ರುಗೊಗೊ ನದಿ ಉಕ್ಕಿ ಹರಿದು ಚಿನ್ನದ ಗಣಿಯಲ್ಲಿ ನೀರು ತುಂಬಿಕೊಂಡಿದ್ದು, ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕಾರ್ಮಿಕರು ಹೊಂಡಗಳಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಹೊರ ಕರೆತರಲು ರಕ್ಷಣಾ ತಂಡಕ್ಕೆ ಸಾಧ್ಯವಾಗದೆ, ಕಾರ್ಮಿಕರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುರುಂಡಿಯ ವಾಯುವ್ಯ ಮತ್ತು ಈಶಾನ್ಯದಲ್ಲಿ ಆಗಾಗ್ಗೆ ಇಂತಹ ಗಣಿಗಾರಿಕೆ ದುರಂತಗಳು ನಡೆಯುತ್ತಲೆ ಇರುತ್ತದೆ. ಅಲ್ಲಿ ಗಣಿಗಾರಿಕೆ ಮಾಡುವ ಜನರು ಅಧಿಕಾರಿಗಳ ಮೇಲ್ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರಾತ್ರಿ ವೇಳೆ ಕೆಲಸಕ್ಕೆ ಹೋಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತದೆ.

About Author

Leave a Reply

Your email address will not be published. Required fields are marked *

You may have missed