ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸ ಶ್ವೇತಭವನದಲ್ಲಿ ಡ್ರಗ್ಸ್ ಪತ್ತೆ!

0

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸವಿರುವ ಶ್ವೇತಭವನದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಶ್ವೇತಭವನದಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಬಿಳಿ ಬಣ್ಣದ ವಸ್ತುವನ್ನು ಕೊಕೇನ್ ಎಂದು ಗುರುತಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಾರಾಂತ್ಯದಲ್ಲಿ ಸ್ಥಳೀಯ ಸಮಯ ರಾತ್ರಿ 8.45 ರ ಸುಮಾರಿಗೆ ವೆಸ್ಟ್ ವಿಂಗ್‍ನ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಪ್ರದೇಶದಲ್ಲಿ ರಹಸ್ಯ ಸೇವಾ ಏಜೆಂಟ್‍ಗಳು ಈ ಬಿಳಿ ಬಣ್ಣದ ಪುಡಿಯನ್ನು ಪತ್ತೆ ಹಚ್ಚಿದ್ದರು.

ಅನುಮಾನಾಸ್ಪದ ಬಿಳಿ ಬಣ್ಣದ ಪುಡಿ ಪತ್ತೆಯಾದ ಸಂದರ್ಭದಲ್ಲಿ ಅಧ್ಯಕ್ಷ ಜೋ ಬಿಡೆನ್ ಅವರು ನಿವಾಸದಲ್ಲಿ ಇರಲಿಲ್ಲ, ಬದಲಿಗೆ ವಾರಾಂತ್ಯವನ್ನು ಕ್ಯಾಂಪ್ ಡೇವಿಡ್‍ನಲ್ಲಿ ಕಾಲ ಕಳೆಯುತ್ತಿದ್ದರು ಎನ್ನಲಾಗುತ್ತಿದೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಯ ಸಿಬ್ಬಂದಿ ವಸ್ತುಗಳ ಮೇಲೆ ತ್ವರಿತ ಪರೀಕ್ಷೆ ನಡೆಸಲು ಆಗಮಿಸಿದರು. ಈ ಪ್ರಾಥಮಿಕ ಪರೀಕ್ಷೆಗಳಲ್ಲಿ ಪುಡಿ ಕೊಕೇನ್ ಎಂದು ತಿಳಿದುಬಂದಿದ್ದು, ಪುಡಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಯಿತು. ಪುಡಿಯನ್ನು ಹೆಚ್ಚಿನ ಮೌಲ್ಯಮಾಪನಕ್ಕಾಗಿ ಕಳುಹಿಸಲಾಗಿದೆ ಮತ್ತು ಅದು ಶ್ವೇತಭವನವನ್ನು ಹೇಗೆ ಪ್ರವೇಶಿಸಿತು ಎಂಬುದರ ಕುರಿತು ತನಿಖೆ ಬಾಕಿಯಿದೆ ಎಂದು ಅಲ್ ಜಜೀರಾ ಪ್ರಕಾರ ಅಧ್ಯಕ್ಷೀಯ ಭದ್ರತೆಯೊಂದಿಗೆ ಕಾರ್ಯ ನಿರ್ವಹಿಸುವ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ವೆಸ್ಟ್ ವಿಂಗ್ ಶ್ವೇತಭವನದ ಒಂದು ವಿಭಾಗವಾಗಿದ್ದು ಅದು ಅಧ್ಯಕ್ಷರ ನಿವಾಸ, ಕಾರ್ಯನಿರ್ವಾಹಕ ಮಹಲುಗೆ ಸಂಪರ್ಕ ಹೊಂದಿದೆ. ಓವಲ್ ಆಫೀಸ್, ಕ್ಯಾಬಿನೆಟ್ ರೂಮ್ ಮತ್ತು ಪ್ರೆಸ್ ರೂಮ್ ಎಲ್ಲವೂ ಅಲ್ಲಿಯೇ ಇದೆ, ಜೊತೆಗೆ ಅಧ್ಯಕ್ಷರ ಸಿಬ್ಬಂದಿ ಸದಸ್ಯರ ಕಚೇರಿಗಳು ಮತ್ತು ಕೆಲಸದ ಸ್ಥಳಗಳಿರುವುದು ವಿಶೇಷ.

 

About Author

Leave a Reply

Your email address will not be published. Required fields are marked *

You may have missed