ಕೊಲಂಬಿಯಾದಲ್ಲಿ ಗಣಿ ಸ್ಫೋಟಗೊಂಡು ಏಳು ಮಂದಿ ಸಾವು

0

ಬೊಗೊಟಾ: ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟಗೊಂಡು ಏಳು ಮಂದಿ ಸಾವನ್ನಪ್ಪಿರುವ ಘಟನೆ ಕೊಲಂಬಿಯಾದ ಕುಕುನುಬಾ ಪುರಸಭೆಯ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದೆ.

ಸ್ಫೋಟದ ವೇಳೆ ಒಟ್ಟು ಹನ್ನೊಂದು ಮಂದಿ ಅವಶೇಷಗಳಡಿ ಸಿಲುಕಿದ್ದು, ಅವರಲ್ಲಿ ನಾಲ್ವರನ್ನು ರಕ್ಷಿಸಲಾಗಿದ್ದು, ಉಳಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 

ಘಟನೆಯ ಬಳಿಕ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೊಲಂಬಿಯಾದಲ್ಲಿ 10,000 ಕ್ಕೂ ಹೆಚ್ಚು ಗಣಿಗಳಿದ್ದು, ಅವುಗಳಲ್ಲಿ ಬಹಳಷ್ಟು ಗಣಿಗಾರಿಕೆಗಳು ಅಕ್ರಮವಾಗಿ ಚಟುವಟಿಕೆ ನಡೆಸುತ್ತಿವೆ.

About Author

Leave a Reply

Your email address will not be published. Required fields are marked *

You may have missed