ರಷ್ಯಾದ ತನಿಖಾ ಮಹಿಳಾ ಪತ್ರಕರ್ತೆ ಮೇಲೆ ಹಲ್ಲೆ, ತಲೆ ಬೋಳಿಸಿ ಚಿತ್ರಹಿಂಸೆ

0

ಚೆಚೆನ್ಯಾ ಪ್ರವಾಸದಲ್ಲಿ ರಷ್ಯಾದ ಪ್ರಶಸ್ತಿ ವಿಜೇತ ತನಿಖಾ ಪತ್ರಕರ್ತೆ ಎಲೆನಾ ಮಿಲಾಶಿನಾ ಅವರ ಮೇಲೆ ಸಶಸ್ತ್ರಧಾರಿಗಳು ಹಲ್ಲೆ ನಡೆಸಿದ್ದು, ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ.

ಹಲ್ಲೆಯಲ್ಲಿ ಎಲೆನಾ ಅವರ ಬೆರಳುಗಳು ಮುರಿದು ಹೋಗಿದ್ದು, ಪ್ರಜ್ಞೆಯನ್ನು ಕೂಡ ಕಳೆದುಕೊಂಡಿದ್ದರು.

ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ ಮುಂಜಾನೆ ಮಿಲಾಶಿನಾ ಮತ್ತು ವಕೀಲ ಅಲೆಕ್ಸಾಂಡರ್ ನೆಮೊವ್ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಸ್ತ್ರಾಸ್ತ್ರಧಾರಿಗಳು ಎಲೆನಾ ಅವನ್ನು ಅಮಾನವೀಯವಾಗಿ ಥಳಿಸಿದ್ದು, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಮಾಸ್ಕೋದಲ್ಲಿ ರಷ್ಯಾದ ಕೆಲವು ಶಾಸಕರು ಮತ್ತು ಅಧಿಕಾರಿಗಳು ದಾಳಿಯನ್ನು ಖಂಡಿಸಿದ್ದು ಘಟನೆಯ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಎಲಾನಾಗೆ ಥಳಿಸಿ ತಲೆ ಬೋಳಿಸಿ ತಲೆಗೆ ಹಸಿರು ಬಣ್ಣವನ್ನು ಬಳಿದಿದ್ದಾರೆ. ನೊವಾಯಾ ಗೆಜೆಟಾ ಪತ್ರಿಕೆಯ ಪ್ರಸಿದ್ಧ ಪತ್ರಕರ್ತೆ ಮಿಲಾಶಿನಾ, ಜರೆಮಾ ಮುಸೇವಾ ಅವರ ಶಿಕ್ಷೆಯ ಕುರಿತು ವರದಿ ಮಾಡಲು ಚೆಚೆನ್ಯಾ ರಾಜಧಾನಿ ಗ್ರೋಜ್ನಿಗೆ ಹೋಗಿದ್ದರು.

ಕಾರಿನ ಚಾಲಕನ್ನು ಬೆದರಿಸಿ ಆತನನ್ನು ಕೆಳಗಿಳಿಸಿ ಬಂದೂಕುಧಾರಿಗಳು ಕಾರಿನೊಳಗೆ ಬಂದರು, ಬಳಿಕ ನನ್ನ ಕೈಕಾಲು ಕಟ್ಟಿ, ತಲೆಗೆ ಬಂದೂಕು ಇಟ್ಟು, ಹಲ್ಲೆ ನಡೆಸಿದ್ದಾರೆ, ತನ್ನ ಬಳಿ ಇದ್ದ ಕ್ಯಾಮರಾ, ಫೋನ್​ ಅನ್ನು ನಾಶಪಡಿಸಿದ್ದಾರೆ ಎಂದು ಘಟನೆಯ ಕುರಿತು ಎಲಾನಾ ಪ್ರತಿಕ್ರಿಯಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed