ಇಮ್ರಾನ್ ಪಕ್ಷಕ್ಕೆ ಮತ್ತೊಬ್ಬ ಹಿರಿಯ ನಾಯಕಿ ರಾಜೀನಾಮೆ

0

ಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಹಿರಿಯ ನಾಯಕಿ ಫಿರ್ದೋಸ್ ಆಶಿಖ್ ಅವಾನ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಮೂಲಕ ಕಳೆದ ಒಂದು ವಾರದಲ್ಲಿ ಪಿಟಿಐ ಪಕ್ಷದಿಂದ ಒಟ್ಟು ನಾಲ್ವರು ಹಿರಿಯ ಮುಖಂಡರು ರಾಜೀನಾಮೆ ನೀಡಿದ್ದಾರೆ.

2019ರಿಂದ 2020ರವರೆಗೆ ಫಿರ್ದೋಸ್ ಮಾಹಿತಿ ಮತ್ತು ಪ್ರಸಾರದಲ್ಲಿ ಪ್ರಧಾನಿಯವರ ವಿಶೇಷ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಇತ್ತೀಚೆಗೆ ನಡೆದ ಹಿಂಸಾತ್ಮಕ ಮತ್ತು ಭಯೋತ್ಪಾದಕ ಚಟುವಟಿಕೆಯನ್ನು ವಿರೋಧಿಸಿ ಮತ್ತು ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ ಜತೆಯಾಗಿ ಸಾಗಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಬಳಿಕ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿರುವುದಾಗಿ ಫಿರ್ದೋಸ್ ಹೇಳಿದ್ದಾರೆ. ಇದಕ್ಕೂ ಮುನ್ನ ಪಿಟಿಐ ಪ್ರಧಾನ ಕಾರ್ಯದರ್ಶಿ ಅಸಾದ್ ಉಮರ್, ಮಾಜಿ ಮಾಹಿತಿ ಸಚಿವ ಪವಾದ್ ಚೌಧರಿ, ಮಾಜಿ ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದರು.

About Author

Leave a Reply

Your email address will not be published. Required fields are marked *

You may have missed