ರಾಕೇಟ್ ದಾಳಿಯ ಸಂದರ್ಭದಲ್ಲಿ ಉಕ್ರೇನ್ ಮಾಧ್ಯಮ ಸಿಬ್ಬಂದಿಯ ಹತ್ಯೆ

0

ಪ್ಯಾರಿಸ್‌: ‘ಉಕ್ರೇನ್‌ನ ಬಖ್ಮಟ್‌ ಸಮೀಪದ ಚಾಸಿವ್‌ ಯಾರ್‌ ಪಟ್ಟಣದ ಮೇಲೆ ಮಂಗಳವಾರ ರಾಕೆಟ್‌ ದಾಳಿ ನಡೆದ ಸಂದರ್ಭದಲ್ಲಿ ತನ್ನ ವಿಡಿಯೊ ಸಂಯೋಜಕ ಅರ್ಮಾನ್‌ ಸೋಲ್ಡಿನ್‌ (32) ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್‌ನ ಅಂತರರಾಷ್ಟ್ರೀಯ ಸುದ್ದಿಸಂಸ್ಥೆಯಾದ ಎಎಫ್‌ಪಿ ತಿಳಿಸಿದೆ.

 

‘ಎಎಫ್‌ಪಿ ತಂಡದ ಪತ್ರಕರ್ತರು ಮಧ್ಯಾಹ್ನದ ನಂತರ ಸೈನಿಕರೊಂದಿಗೆ ಪ್ರಯಾಣಿಸುತ್ತಿದ್ದಾಗ ರಾಕೆಟ್ ದಾಳಿ ನಡೆದಿದೆ. ದಾಳಿಯಲ್ಲಿ ಇನ್ನುಳಿದ ಪತ್ರಕರ್ತರಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ಎಎಫ್‌ಪಿ ಹೇಳಿದೆ.

‘ಉಕ್ರೇನ್‌ ಯುದ್ಧದ ಕುರಿತು ವರದಿಗಳನ್ನು ಮಾಡುವ ಪತ್ರಕರ್ತರು ಎಂತಹ ತೊಂದರೆ ಹಾಗೂ ಅಪಾಯಗಳನ್ನು ಎದುರಿಸುತ್ತಾರೆ ಎನ್ನುವುದಕ್ಕೆ ಅರ್ಮಾನ್‌ ಸಾವು ಒಂದು ಉದಾಹರಣೆ’ ಎಂದು ಎಎಫ್‌ಪಿ ಅಧ್ಯಕ್ಷ ಫ್ಯಾಬ್ರಿಸ್‌ ‍ಫ್ರೈಸ್‌ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed