ಮದುವೆ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ದೋಣಿ ಮುಳುಗಡೆ: 103 ಮಂದಿ ಸಾವು

0

ಬುಜಾ: ಮದುವೆ ಮುಗಿಸಿಕೊಂಡು ಖುಷಿ ಖುಷಿಯಾಗಿ ವಾಪಸ್ ಆಗುತ್ತಿದ್ದ ವೇಳೆ ಬೋಟ್ ಮಗುಚಿ ಬಿದ್ದ ಪರಿಣಾಮ ಮಕ್ಕಳು ಸೇರಿ 103 ಮಂದಿ ಮೃತಪಟ್ಟ ಘಟನೆ ಉತ್ತರ ನೈಜಿರಿಯಾದ ಕ್ವಾರಾ ರಾಜ್ಯದ ಪಟೇಗಿ ಜಿಲ್ಲೆಯಲ್ಲಿ ನಡೆದಿದೆ.

ನೈಜರ್ ನದಿಗೆ ಬಿದ್ದಿರುವ ಜನರನ್ನು ಸ್ಥಳೀಯರು ಮತ್ತು ಪೊಲೀಸರು ಸೇರಿ ಹುಡುಕುತ್ತಿದ್ದಾರೆ.

ಇದುವರೆಗೆ 100 ಜನರನ್ನು ರಕ್ಷಣೆ ಮಾಡಲಾಗಿದೆ. ನದಿಯಲ್ಲಿ ಮುಳುಗಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮದುವೆಯಲ್ಲಿ ಭಾಗಿಯಾಗಿದ್ದ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯ ಬಳಿಕ ರಾತ್ರಿ ಅವರೆಲ್ಲಾ ಪಾರ್ಟಿ ಮಾಡಿದ್ದರು ಎಂದು ವರದಿಯಾಗಿದೆ. ಮೋಟಾರು ಸೈಕಲ್‌ ಗಳಲ್ಲಿ ಸಮಾರಂಭಕ್ಕೆ ಆಗಮಿಸಿದ ಅವರು, ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ ನಂತರ ಸ್ಥಳೀಯವಾಗಿ ತಯಾರಿಸಿದ ದೋಣಿಯಲ್ಲಿ ತೆರಳಬೇಕಾಯಿತು ಎಂದು ಅವರು ಹೇಳಿದರು.

ಬೋಟ್ ಜನರಿಂದ ತುಂಬಿ ಹೋಗಿತ್ತು. ಸುಮಾರು 300ಕ್ಕೂ ಹೆಚ್ಚು ಮಂದಿ ಬೋಟ್ ನಲ್ಲಿದ್ದರು. ದೋಣಿಯು ನೀರಿನಲ್ಲಿ ಒಂದು ದೊಡ್ಡ ಮರದ ದಿಮ್ಮಿಯನ್ನು ಹೊಡೆದು ಎರಡು ಭಾಗವಾಗಿದ್ದು ಇದರಿಂದ ಈ ಭೀಕರ ದುರ್ಘಟನೆ ಸಂಭವಿಸಿದೆ.

About Author

Leave a Reply

Your email address will not be published. Required fields are marked *

You may have missed