ನ್ಯೂಯಾರ್ಕ್‌ನಲ್ಲಿ ಕುಡಿದು ಟ್ರಕ್ ಚಲಾಯಿಸಿ ಇಬ್ಬರು ಬಾಲಕರನ್ನು ಕೊಂದ ಭಾರತೀಯ ವ್ಯಕ್ತಿ

0

ನ್ಯೂಯಾರ್ಕ್: ಭಾರತೀಯ ಮೂಲದ ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಟ್ರಕ್ ಚಲಾಯಿಸಿ ಪರಿಣಾಮ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ನ್ಯೂಯಾರ್ಕ್‌ನ ಲಾಂಗ್‌ ಐಸ್‌ಲ್ಯಾಂಡ್‌ನಲ್ಲಿ ನಡೆದಿದೆ.‌

ಟ್ರಕ್ ಚಾಲಕ 34 ವರ್ಷದ ಭಾರತೀಯ ವ್ಯಕ್ತಿ ಅಮನದೀಪ್ ಸಿಂಗ್ ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ನಾರ್ತ್ ಬ್ರಾಡ್‌ವೇ ನಲ್ಲಿ ಹೋಗುತ್ತಿದ್ದಾಗ ಕಂಠಪೂರ್ತಿ ಕುಡಿದಿದ್ದ ಅಮನದೀಪ್‌ ಎದುರಿಗೆ ಬರುತ್ತಿದ್ದ ಸೆಡಾನ್ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ಕಾರಿನಲ್ಲಿದ್ದ 14 ವರ್ಷ ವಯಸ್ಸಿನ ಡ್ರೇವ್, ಇಥನ್ ಎಂಬ ಇಬ್ಬರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಇನ್ನಿಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪೊಲೀಸ್ ಅಧಿಕಾರಿ ಸ್ಟೀಪನ್ ಫಿಜ್‌ಫ್ಯಾಟ್ರಿಕ್ ನಾನು ನನ್ನ ವೃತ್ತಿ ಜೀವನದಲ್ಲಿ ನೋಡಿರುವ ಭೀಕರ ದುರಂತ ಎಂದಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಸರಕು ಸಾಗಣೆ ವಾಹನದ ಚಾಲಕನಾಗಿರುವ ಆರೋಪಿ ಅಮನದೀಪ್ ಈ ಅಪಘಾತ ಮಾಡುವ ಮುನ್ನ ಇನ್ನೊಂದು ವಾಹನಕ್ಕೆ ಡಿಕ್ಕಿ ಮಾಡಿದ್ದ. ಆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತನನ್ನು ವೈದ್ಯಕೀಯ ತಪಾಸಣೆ ಮಾಡಿದಾಗ ವಿಪರೀತ ಮದ್ಯ ಸೇವಿಸಿದ್ದ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed