ಮೊಜಾಂಬಿಕಾ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ವಿದೇಶಾಂಗ ಸಚಿವ ಜೈಶಂಕರ್ ರೈಲು ಸವಾರಿ

0

ಮಾಪುಟೊ: ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮೊಜಾಂಬಿಕಾ ದೇಶದ ಪ್ರವಾಸದಲ್ಲಿದ್ದು, ಮೇಡ್ ಇನ್ ಇಂಡಿಯಾ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ರೈಲ್ವೆ ಜಾಲಗಳಲ್ಲಿ ವಿದ್ಯುತ್ ಬಳಕೆ ಮತ್ತು ಜಲಮಾರ್ಗ ಸಂಪರ್ಕವನ್ನು ವಿಸ್ತರಿಸಲು ಸಹಾಯ ಮಾಡುವಲ್ಲಿ ಭಾರತದ ಪಾಲುದಾರಿಕೆಯ ಬಗ್ಗೆ ಮೊಜಾಂಬಿಕಾ ಸಾರಿಗೆ ಸಚಿವರೊಂದಿಗೆ ಚರ್ಚಿಸಿದರು.

 

ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಗುರುವಾರ ಮೊಜಾಂಬಿಕ್‌ನ ರಾಜಧಾನಿಗೆ ಆಗಮಿಸಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಆಫ್ರಿಕನ್ ದೇಶದ ಸಂಸತ್ತಿನ ಅಧ್ಯಕ್ಷರನ್ನು ಭೇಟಿ ಮಾಡಿದರು. ಏಪ್ರಿಲ್ 13 ರಿಂದ ಇಂದಿನವರೆಗೆ ಅಂದರೆ ಏ. 15 ರವರೆಗೆ ಜೈ ಶಂಕರ್ ಮೊಜಾಂಬಿಕಾ ಪ್ರವಾಸದಲ್ಲಿರಲಿದ್ದಾರೆ. ಆ ಮೂಲಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರೊಬ್ಬರು ಆ ದೇಶಕ್ಕೆ ನೀಡಿರುವ ಮೊದಲ ಭೇಟಿಯಾಗಿದೆ.

ಮೊಜಾಂಬಿಕ ಸಾರಿಗೆ ಮತ್ತು ಸಂವಹನ ಸಚಿವರು ಮತ್ತು ಮೊಜಾಂಬಿಕ ಬಂದರು ಮತ್ತು ರೈಲು ಪ್ರಾಧಿಕಾರದ ಅಧ್ಯಕ್ಷ ಮೇಟಿಯುಸ್ ಮಗಲಾ ಅವರ ಜೊತೆ ನಡೆಸಿದ ಹಸಿರು ಸಾರಿಗೆ ಸಂಭಾಷಣೆ ಅದ್ಭುತವಾಗಿದೆ. ರೈಲು ಜಾಲಗಳು, ವಿದ್ಯುತ್ ಚಲನಶೀಲತೆ ಮತ್ತು ಜಲಮಾರ್ಗಗಳ ಸಂಪರ್ಕವನ್ನು ವಿಸ್ತರಿಸುವ ಕುರಿತು ಮಾತನಾಡಿದೆವು. ಈ ನಿಟ್ಟಿನಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ” ಎಂದು ಸಚಿವ ಜೈಶಂಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed