1,600 ಲೀಟರ್ ಎದೆಹಾಲು ದಾನ ಮಾಡಿ ಸಾವಿರಾರು ಶಿಶುಗಳ ಹಸಿವು ನೀಗಿಸಿದ ಮಹಿಳೆ

0

ತಾಯಿಯ ಹಾಲು ಅಮೃತ.. ಅದ್ಭುತ.. ​​ಆರೋಗ್ಯಕರ..ಮಗು ಹುಟ್ಟಿದ ಆರು ತಿಂಗಳ ಕಾಲ ತಾಯಿಯ ಎದೆ ಹಾಲು ಬಿಟ್ಟು ಬೇರಾವುದನ್ನೂ ನೀಡಲು ವೈದ್ಯರು ಸೂಚನೆ ನೀಡುವುದಿಲ್ಲ. ಇತ್ತೀಚೆಗೆ ಅದೆಷ್ಟೋ ಮಕ್ಕಳು ತಾಯಿಯ ಎದೆ ಹಾಲಿನಿಂದ ವಂಚಿತರಾಗಿರುತ್ತಾರೆ. ಅಂತಹ ಅದೆಷ್ಟೋ ಮಕ್ಕಳಿಗೆ ಅಮೆರಿಕದಲ್ಲಿರುವ ಮಾತೃಮೂರ್ತಿ ತನ್ನ ಎದೆಹಾಲು ನೀಡಿ ಮಮತ ತುಂಬಿದ್ದಾರೆ.

ಈಕೆಯ ಈ ತ್ಯಾಗಕ್ಕೆ ಮೆಚ್ಚಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ.

ತಾಯಿ ಎದೆ ಹಾಲಿನ ಕೊರತೆಯಿಂದ ಅನೇಕ ಮಕ್ಕಳು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇಂಥವರಿಗೆ ಆಸರೆಯಾದ ಅಮೆರಿಕದ ಎಲಿಜಬೆತ್ ಆಂಡರ್ಸನ್ ಸಿಯೊರಾ ಇಬ್ಬರು ಮಕ್ಕಳಿಗೆ ಮಾತ್ರವಲ್ಲದೆ ಸಾವಿರಾರು ಶಿಶುಗಳಿಗೆ ತಮ್ಮ ಎಎ ಹಾಲನ್ನು ದಾನ ಮಾಡಿದ್ದಾರೆ. ಯಾವ ತಾಯಿಯೂ ಸಾಧಿಸಲಾಗದ ಅತ್ಯುತ್ತಮ ಕೆಲಸ ಮಾಡಿದ್ದೀರಿ, ಯಾವ ತಾಯಿಗೂ ಸಿಗದ ಅಪರೂಪದ ಅದ್ಭುತ ಅವಕಾಶ ನಿಮಗೆ ಸಿಕ್ಕಿದೆ ಎಂದು ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌ ಹೇಳಿದೆ.

ಎಲಿಸಬೆತ್ ಆಂಡರ್ಸನ್ ಅಮೆರಿಕಾದಲ್ಲಿನ ಮದರ್ ಮಿಲ್ಕ್ ಬ್ಯಾಂಕ್‌ಗೆ ಹಾಲನ್ನು ದಾನ ಮಾಡಿದ್ದಾರೆ. ಎಲಿಸಬೆತ್ ಇದುವರೆಗೆ ಸುಮಾರು 1,6೦೦ ನೂರು ಲೀಟರ್ ಹಾಲನ್ನು ದಾನ ಮಾಡಿದ್ದಾರೆ. ಹೈಪರ್ ಲ್ಯಾಕ್ಟೇಸ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಎಲಿಸಬೆತ್ ತನ್ನ ಕೊರತೆಯನ್ನು ಇತರರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಹೈಪರ್ ಲ್ಯಾಕ್ಟೇಸ್ ಸಿಂಡ್ರೋಮ್ ಅತಿಯಾದ ಹಾಲು ಉತ್ಪಾದನೆಗೆ ಕಾರಣವಾಗುತ್ತದೆ. ಕಳೆದ ಒಂಬತ್ತು ವರ್ಷಗಳಲ್ಲಿ ಸುಮಾರು ಹತ್ತು ಸಾವಿರ ಲೀಟರ್ ಎದೆಹಾಲು ವಿತರಿಸಿದ್ದಾರೆ. ಆಕೆಯಲ್ಲಿರುವ ತಾಯಿಯ ಹೃದಯವನ್ನು ಗುರುತಿಸಿದ ಮದರ್ ಮಿಲ್ಕ್ ಬ್ಯಾಂಕ್ ವ್ಯವಸ್ಥಾಪಕರು ಈ ವಿಷಯವನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಗಮನಕ್ಕೆ ತಂದರು.

ಒಂಬತ್ತು ವರ್ಷಗಳಿಂದ ನಿರಂತರವಾಗಿ ಎದೆಹಾಲು ನೀಡುತ್ತಿರುವ ಎಲಿಸಬೆತ್ ಅವರ ಔದಾರ್ಯವನ್ನು ಗುರುತಿಸಿದ ಗಿನ್ನಿಸ್ ಸಂಘಟಕರು ಆಕೆಯನ್ನು ಶ್ಲಾಘಿಸಿ ಎಲಿಸಬೆತ್ ಹೆಸರನ್ನು ಬರೆದಿದ್ದಾರೆ. ಹೈಪರ್‌ಲ್ಯಾಕ್ಟಾಟಿನ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಎಲಿಸಬೆತ್‌ಗೆ ಪ್ರತಿ ಒಂಬತ್ತು ನಿಮಿಷಗಳಿಗೊಮ್ಮೆ ಹಾಲು ಉತ್ಪಾದನೆಯಾಗುತ್ತಂತೆ. ಆಕೆಯಲ್ಲಿರುವ ಈ ಕೊರತೆ ಅದೆಷ್ಟೂ ಮಕ್ಕಳ ಹಸಿವನ್ನು ನೀಗಿಸಿದೆ.

About Author

Leave a Reply

Your email address will not be published. Required fields are marked *

You may have missed