ಬ್ರಿಟನ್​​​ ರಾಜಕೀಯ ಒತ್ತಡಕ್ಕೆ ಬಿಬಿಸಿ ವಾಹಿನಿಯ ಕಾರ್ಯಕ್ರಮಗಳು ರದ್ದು

0

ಬಿಬಿಸಿ ವಾಹಿನಿಯ ಆಂತರಿಕ ವಿಚಾರಗಳು ಇದೀಗ ಬೀದಿಗೆ ಬಂದು ನಿಂತಿದೆ. ಫುಟ್​ಬಾಲ್​ ಕುರಿತ ‘ಮ್ಯಾಚ್​ ಆಫ್​ ದ ಡೇ’ ಕಾರ್ಯಕ್ರದ ನಿರೂಪಕ ಗ್ಯಾರಿ ಲಿನೇಕರ್​ ಅವರನ್ನು ತಾತ್ಕಾಲಿಕವಾಗಿ ವಾಹಿನಿಯಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ. ರಾಜಕೀಯ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವಾಹಿನಿಯ ವಿರುದ್ಧ ಅದರ ಮುಖ್ಯ ಕಾರ್ಯಕ್ರಮಗಳ ಕೆಲವು ನಿರೂಪಕರೇ ತಿರುಗಿ ಬಿದ್ದಿದ್ದಾರೆ.

 

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ವಾರಗಳ ಹಿಂದೆ ನರೇಂದ್ರ ಮೋದಿ ಕುರಿತು ಬಿಬಿಸಿ ಮಾಡಿದ್ದ ಸಾಕ್ಷ್ಯಚಿತ್ರವು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಕಾರ್ಯಕ್ರಮಗಳಲ್ಲಿ ರಾಯಕೀಯ ಹಸ್ತಕ್ಷೇಪ ಇಲ್ಲ ಎಂದು ಬಿಬಿಸಿ ವಾದಿಸಿತ್ತು. ಆದರೆ ಈಗ ಬ್ರಿಟನ್​ನಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ ಬಿಬಿಸಿ ವಾಹಿನಿಯ ದ್ವಂದ್ವ ನೀತಿ ಬಯಲಾಗಿದೆ.

ನಿರಾಶ್ರಿತರ ಕುರಿತಂತೆ ಬ್ರಿಟನ್​ ಸರ್ಕಾರದ ನೀತಿಯನ್ನು ವಿರೋಧಿಸಿ ಅನೇಕರು ಧ್ವನಿ ಎತ್ತುತ್ತಿದ್ದಾರೆ. ಆ ಪೈಕಿ ಮಾಜಿ ಫುಟ್​ಬಾಲ್​ ಆಟಗಾರ ಹಾಗೂ ಬಿಸಿಸಿ ವಾಹಿನಿಯ ‘ಮ್ಯಾಚ್​ ಆಫ್​ ದ ಡೇ’ ಕಾರ್ಯಕ್ರಮದ ನಿರೂಪಕ ಗ್ಯಾರಿ ಲಿನೇಕರ್​ ಕೂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಸರ್ಕಾರದ ನೀತಿಯನ್ನು ವಿರೋಧಿಸಿ ಟ್ವೀಟ್​ ಮಾಡಿದರು. ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಅವರು ‘ಮ್ಯಾಚ್​ ಆಫ್​ ದ ಡೇ’ ಕಾರ್ಯಕ್ರಮವನ್ನು ನಡೆಸಿಕೊಡಬಾರದು ಎಂದು ಬಿಸಿಸಿ ಸೂಚನೆ ನೀಡಿದೆ.

About Author

Leave a Reply

Your email address will not be published. Required fields are marked *

You may have missed