5 ವರ್ಷಗಳ ಬಳಿಕ ಅಮೆರಿಕ ರಾಜ್ಯ ಕಾರ್ಯದರ್ಶಿ ಚೀನಾಗೆ ಮೊದಲ ಭೇಟಿ

0

ಬೀಜಿಂಗ್: ವಿಶ್ವದ ದೊಡ್ಡ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ ನಡುವೆ ನಿರಂತರ ಸಂಘರ್ಷ ನಡೆಯುತ್ತಲೆ ಇದೆ. ಈ ಸಂಘರ್ಷದ ನಡುವೆಯೂ 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್ ಚೀನಾಗೆ ಭೇಟಿ ನೀಡಿ ಕುತೂಹಲ ಮೂಡಿಸಿದ್ದಾರೆ.

ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪರಸ್ಪರ ಹಸ್ತಲಾಘವ ಮಾಡು ಮೂಲಕ ಶುಭಾಶಯ ಕೋರಿದ್ದರು. ಬೈಡನ್‌ ಯುಎಸ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅದು ಅವರ ಮೊದಲ ಅಧಿಕೃತ ಸಭೆಯಾಗಿತ್ತು. .

ಈ ಸೌಹಾರ್ದಯುತ ಶೃಂಗಸಭೆಯ ಫಲವಾಗಿ ಬ್ಲಿಂಕೆನ್ ನಾಲ್ಕು ತಿಂಗಳ ಹಿಂದೆ ಚೀನಾಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅಮೆರಿಕದ ವಾಯುಗಡಿಯ ಅಟ್ಲಾಂಟಿಕಾ ಸಮುದ್ರ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿದ್ದ, ಚೀನಾದ ಶಂಕಿತ ಕಣ್ಗಾವಲು ಬಲೂನ್‌ ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಮತ್ತಷ್ಟು ಉದ್ವಿಘ್ನತೆ ಉಂಟಾದ ಹಿನ್ನೆಲೆಯಲ್ಲಿ ಬ್ಲಿಂಕೆನ್‌ ಪ್ರವಾಸವನ್ನು ಮೊಟಕುಗೊಳಿಸಿದ್ದರು.

ಈಗ ಬ್ಲಿಂಕನ್‌ ಚೀನಾಗೆ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ʼಎರಡೂ ದೇಶಗಳ ನಡುವಿನ ತಪ್ಪಾದ ಲೆಕ್ಕಾಚಾರಗಳನ್ನು ಸರಿ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಲು ಹಾಗೂ ನಮ್ಮ ಉತ್ತಮ ಸಂಬಂಧವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಪ್ರಯತ್ನಿಸುವುದಾಗಿʼ ಬ್ಲಿಂಕೆನ್‌ ಭೇಟಿಯ ವೇಳೆ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed