ಮೊಸಳೆಯೊಂದಿಗೆ ಹಸೆಮಣೆ ಏರಿದ ಮೆಕ್ಸಿಕನ್ ಮೇಯರ್

0

ಸ್ಯಾನ್ ಪೆಡ್ರೊ ಹುಮೆಲುಲಾ: ದಕ್ಷಿಣ ಮೆಕ್ಸಿಕೋ ಪಟ್ಟಣದ ಮೇಯರ್‌ ವಿಕ್ಟರ್ ಹ್ಯೂಗೋ ಸೋಸಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕರ್ ಮದುವೆಯಾಗಿರುವುದು ಯಾವುದೋ ಹುಡುಗಿಯನ್ನಲ್ಲ, ಬದಲಾಗಿ ಮೊಸಳೆಯನ್ನು ವರಿಸುವ ಮೂಲಕ ಸುದ್ದಿಯಾಗಿದ್ದಾರೆ.

ಮೆಕ್ಸಿಕೋದ ಟೆಹುವಾಂಟೆಪೆಕ್ ಇಸ್ತಮಸ್‌ನಲ್ಲಿರುವ ಸ್ಯಾನ್ ಪೆಡ್ರೊ ಹುವಾಮೆಲುಲಾದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಅಲಿಸಿಯಾ ಆಡ್ರಿಯಾನಾ ಹೆಸರಿನ ಮೊಸಳೆಯನ್ನು ಮದುವೆಯಾಗಿದ್ದಾರೆ.

ಆ ಮೂಲಕ ತಮ್ಮ ಪೂರ್ವಜರ ಆಚರಣೆಗಳನ್ನು ಮುಂದುವರಿಸಿದ್ದಾರೆ.

ನಾನು ಮತ್ತು ಮೊಸಳೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರೀತಿ ಇಲ್ಲದೆ ಮದುವೆಯಾಗಲು ಸಾಧ್ಯವಿಲ್ಲ. ನಾನು ಈ ರಾಜಕುಮಾರಿ ಹುಡುಗಿಯೊಂದಿಗೆ ಮದುವೆಯಾಗಿದ್ದೇನೆ ಎಂದು ಹ್ಯೂಗೋ ಸೋಸಾ ತಿಳಿಸಿದ್ದಾರೆ.

ಮದುವೆಯಂತಹ ಸಂಬಂಧಗಳ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಇಲ್ಲಿನ ಎರಡು ಸ್ಥಳೀಯ ಜನಾಂಗಗಳು ಪುರುಷ ಮತ್ತು ಹೆಣ್ಣು ಸರೀಸೃಪದೊಂದಿಗೆ ವಿವಾಹ ಮಾಡುವ ಪದ್ಧತಿ ಆಚರಿಸಿಕೊಂಡು ಬಂದಿದ್ದಾರೆ. ಸಾಕಷ್ಟು ವರ್ಷಗಳ ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು ಇದೀಗ ಹ್ಯೂಗೋ ಸೋಸಾ ಈ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed