ಡೈವೋರ್ಸ್ ಸೆಲೆಬ್ರೇಟ್ ಮಾಡಲು ಹೋಗಿ ಆಸ್ಪತ್ರೆ ಸೇರಿದ ಪತಿ

0

ಬ್ರೆಜಿಲ್​​​​: ವ್ಯಕ್ತಿಯೊರ್ವ ತನ್ನ ಹೆಂಡತಿಯೊಂದಿಗೆ ಜೀವನ ಮುಂದುವರಿಸಲು ಸಾಧ್ಯವಿಲ್ಲದ ಕಾರಣದಿಂದಾಗಿ ಸಾಕಷ್ಟು ಹರಸಾಹಸ ಮಾಡಿ ಆಕೆಯಿಂದ ವಿಚ್ಚೇದನವನ್ನು ಪಡೆದುಕೊಂಡಿದ್ದಾನೆ.

ಕಡೆಗೂ ಪತ್ನಿಯಿಂದ ವಿಚ್ಛೇದನ ಸಿಕ್ಕಿರುವ ಖುಷಿಯನ್ನು ಸಂಭ್ರಮಿಸಲು ಮುಂದಾಗಿದ್ದಾನೆ .

ಆದರೆ ಆತನ ಖುಷಿಯೇ ಆತನ ಜೀವಕ್ಕೆ ಕಂಟಕವಾಗಿದೆ. ಇದೀಗಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಬ್ರೆಜಿಲ್​​​​ ಮೂಲದ ರಫಾಲೆಸಾಂಟೊಸ್ ಎಂಬ ವ್ಯಕ್ತಿ ತನ್ನ ಪತ್ನಿಗೆ ವಿಚ್ಛೇದನವನ್ನು ನೀಡಿದ್ದ. ಇದಾದ ಬಳಿಕ ಈ ಖುಷಿಯನ್ನು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವಂತೆ ಸಂಭ್ರಮಿಸಲು ಮುಂದಾಗಿದ್ದಾನೆ. ಸುಮಾರು 70 ಅಡಿ ಎತ್ತರದಿಂದ ಬಂಗಿ ಜಂಪಿಂಗ್​​​​ ಮಾಡಲು ಹೋಗಿದ್ದಾನೆ. ಬಂಗಿ ಜಂಪಿಂಗ್​​ ಒಂದು ರೀತಿಯ ಸಾಹಸಮಯ ಕ್ರೀಡೆ. ಈ ಸಮಯದಲ್ಲಿ ಮುಂಚಿತವಾಗಿ ತರಬೇತಿ ಹಾಗೂ ಮುಂಜಾಗೃತ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಆದರೆ ಈತ ಬಂಗಿ ಜಂಪಿಂಗ್ ವೇಳೆ ಹಗ್ಗ ತುಂಡಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುತ್ತಿಗೆ ಮತ್ತು ಸೊಂಟದ ಬೆನ್ನುಮೂಳೆ ಮುರಿದಿದೆ. “ವಿಚ್ಛೇದನದ ನಂತರ, ನಾನು ಜೀವನವನ್ನು ಆನಂದಿಸಲು ಬಯಸಿದ್ದೆ” ಎಂದು ರಾಫೆಲ್ ಹೇಳಿಕೊಂಡಿದ್ದಾನೆ.

About Author

Leave a Reply

Your email address will not be published. Required fields are marked *

You may have missed