ಯುದ್ಧ ಪೀಡಿತ ಉಕ್ರೇನ್ ಗೆ ದಿಢೀರ್ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

0

ಕೈವ್: ರಷ್ಯಾ-ಉಕ್ರೇನ್ ಯುದ್ಧವು ಆರಂಭವಾಗಿ ಒಂದು ವರ್ಷವಾಗುತ್ತಿರುವ ಸಮಯದಲ್ಲೇ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಕೈವ್ ಗೆ ದಿಢೀರ್ ಭೇಟ ನೀಡಿದ್ದಾರೆ.

‘ನಾವು ಉಕ್ರೇನ್ ಮೇಲೆ ರಷ್ಯಾದ ಕ್ರೂರ ಆಕ್ರಮಣಕ್ಕೆ ವರ್ಷ ಸಮೀಪಿಸುತ್ತಿರುವಾಗ, ಅಧ್ಯಕ್ಷ ಝೆಲೆನ್ಸ್ಕಿಯನ್ನು ಭೇಟಿ ಮಾಡಲು ಮತ್ತು ಉಕ್ರೇನ್ ಪ್ರಜಾಪ್ರಭುತ್ವ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಲು ನಾನು ಇಂದು ಕೈವ್ ನಲ್ಲಿದ್ದೇನೆ’ ಎಂದು ಟ್ವಿಟ್ಟರ್ ನಲ್ಲಿ ಯುಎಸ್ ಅಧ್ಯಕ್ಷರ ಕಚೇರಿಯಲ್ಲಿ ತಿಳಿಸಿದೆ.

 

‘ಅಧ್ಯಕ್ಷ ಜೋ ಬೈಡನ್ ಕೈವ್ ನಲ್ಲಿದ್ದಾರೆ. ಉಕ್ರೇನ್‌ ಗೆ ಅಗತ್ಯವಿರುವ ಎಲ್ಲಾ ಶಸ್ತ್ರಾಸ್ತ್ರಗಳು ಸಿಗುತ್ತವೆ. ಯಾವುದೇ ರಾಜಿ ಇಲ್ಲ” ಎಂದು ಉಕ್ರೇನಿಯನ್ ಅಧ್ಯಕ್ಷರ ಸಲಹೆಗಾರ ಟ್ವಿಟ್ಟ ಮೂಲಕ ತಿಳಿಸಿದ್ದಾರೆ.

‘ಸುಮಾರು ಒಂದು ವರ್ಷದ ಹಿಂದೆ ಪುಟಿನ್ ತನ್ನ ಆಕ್ರಮಣವನ್ನು ಪ್ರಾರಂಭಿಸಿದಾಗ, ಉಕ್ರೇನ್ ದುರ್ಬಲವಾಗಿದೆ ಮತ್ತು ಪಶ್ಚಿಮವು ವಿಭಜನೆಯಾಗಿದೆ ಎಂದು ಅವರು ಭಾವಿಸಿದ್ದರು. ಅವರು ನಮ್ಮನ್ನು ಮೀರಿಸಬಹುದೆಂದು ಅವರು ಭಾವಿಸಿದ್ದರು. ರಷ್ಯಾದ ಕ್ರೂರ ಆಕ್ರಮಣದ ಒಂದು ವರ್ಷದ ವಾರ್ಷಿಕೋತ್ಸವವನ್ನು ಗುರುತಿಸಲು ಜಗತ್ತು ಸಿದ್ಧವಾಗಿದೆ. ನಾನು ಇಂದು ಕೈವ್‌ ನಲ್ಲಿ ಅಧ್ಯಕ್ಷ ಝೆಲೆನ್ಸ್‌ಕಿಯನ್ನು ಭೇಟಿಯಾಗಿದ್ದೇನೆ. ಉಕ್ರೇನ್‌ ನ ಪ್ರಜಾಪ್ರಭುತ್ವ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ನಮ್ಮ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ’ ಎಂದು ಶ್ವೇತಭವನ ತಿಳಿಸಿದೆ.

About Author

Leave a Reply

Your email address will not be published. Required fields are marked *

You may have missed