ಅಮೆರಿಕದ ಗ್ಯಾಸ್ ಸ್ಟೇಷನ್​​ನಲ್ಲಿ ಗುಂಡೇಟಿಗೆ ಬಲಿಯಾದ ಭಾರತೀಯ ವಿದ್ಯಾರ್ಥಿ

0

ಮರಾವತಿ: ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದ 24ರ ಹರೆಯದ ಆಂಧ್ರ ಪ್ರದೇಶ ಮೂಲದ ಯುವಕ ಗುಂಡಿಗೆ ಬಲಿಯಾಗಿದ್ದಾನೆ.

ಸಯೇಶ್ ವೀರಾ ಮೃತ ಭಾರತೀಐ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಗ್ಯಾಸ್ ಸ್ಟೇಷನ್​​ನಲ್ಲಿ ಕೆಲಸ ಮಾಡುತ್ತಿದ್ದು, ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ ಎಂದು ಅಮೆರಿಕದ ಒಹಾಯೊದ ಪೊಲೀಸರು ಹೇಳಿದ್ದಾರೆ.

 

ಮಾಧ್ಯಮಗಳ ವರದಿ ಪ್ರಕಾರ ಏಪ್ರಿಲ್​​ 20ರಂದು ಮಧ್ಯರಾತ್ರಿ 12:50ಕ್ಕೆ ಶೂಟೌಟ್ ನಡೆದಿದೆ ಎನ್ನಲಾಗಿದೆ. ಕೊಲಂಬಸ್ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಸಂತ್ರಸ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡ ಶಂಕಿತ ವ್ಯಕ್ತಿಯ ಪೋಟೊವನ್ನು ಕೊಲಂಬಂಸ್ ಡಿವಿಷನ್ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ವೀರಾ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸುವುದಕ್ಕಾಗಿ ಆನ್​​ಲೈನ್ ಫಂಡ್ ರೈಸರ್ ಪ್ರೋಗ್ರಾಂ ಮೇಲ್ವಿಚಾರಣೆ ಮಾಡುತ್ತಿರುವ ರೋಹಿತ್ ಯಾಲಮಂಚಿ ಪ್ರಕಾರ, ವೀರಾ ಅವರು ಮಾಸ್ಟರ್ಸ್ ಡಿಗ್ರಿ ಮಾಡುತ್ತಿದ್ದು H-1B ವೀಸಾ ಹೊಂದಿದ್ದರು. ಇನ್ನು 10 ದಿನಗಳಲ್ಲಿ ಅವರ ವ್ಯಾಸಾಂಗ ಮುಗಿಯುವುದರಲ್ಲಿತ್ತು. ಆದರೆ ಅಷ್ಟರಲ್ಲಾಗಲೇ ಈ ದುರ್ಷಟನೆ ನಡೆದಿದೆ.

About Author

Leave a Reply

Your email address will not be published. Required fields are marked *

You may have missed