ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ

0

ವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಆರೋಗ್ಯಕಾರ್ಯಕರ್ತರಿಗೆ 6 ಅಥವಾ 12 ತಿಂಗಳ ಬಳಿಕ ಮತ್ತೊಂದು ಬೂಸ್ಟರ್ ಡೋಸ್ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಸಲಹೆ ನೀಡಿದೆ.

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು, ರಕ್ಷಣಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಬೂಸ್ಟರ್ ಡೋಸ್ ನೀಡಬೇಕು.

ಒಂದು ವೇಳೆ ಇವರು ಕೋವಿಡ್‍ಗೆ ತುತ್ತಾದರೆ ಹೆಚ್ಚಿನ ತೊಂದರೆ ಎದುರಿಸ ಬೇಕಾಗಬಹುದು ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಯುವಕರಿಗೆ ಈಗಾಗಲೇ ನೀಡಿರುವ ಬೂಸ್ಟರ್ ಡೋಸ್ ಸಾಕಾಗುತ್ತದೆ ಎಂಬ ಅಭಿಪ್ರಾಯವನ್ನು ಸಮಿತಿ ವ್ಯಕ್ತಪಡಿಸಿದೆ.

ಕೋವಿಡ್ ಸೋಂಕುನಿಂದ ಕೊಂಚ ನೆಮ್ಮದಿಯಾಗಿದ್ದ ಜನತೆ ಇದೀಗ ಮತ್ತೆ ಚಿಂತೆ ಶುರುವಾಗಿದೆ. ಶನಿವಾರ 2994 ಪ್ರಕರಣಗಳು ದಾಖಲಾಗಿದ್ದು, 9 ಮಂದಿ ಸಾವಿಗೀಡಾಗಿದ್ದಾರೆ. ಕೋವಿಡ್‍ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆ ಇರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 16,354ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಬೂಸ್ಟರ್ ಡೋಸ್ ನೀಡುವಂತೆ ಎಚ್ಚರಿಕೆ ನೀಡಿದೆ.

About Author

Leave a Reply

Your email address will not be published. Required fields are marked *

You may have missed