ಅಕ್ರಮ ವಲಸಿಗರ ನಿಯಂತ್ರಣಕ್ಕೆ ಮುಂದಾದ ಬ್ರಿಟನ್ ಪ್ರಧಾನಿ ರಿಷಿ ಸುನಕ್

0

ವದೆಹಲಿ: ಬ್ರಿಟನ್ ದೇಶಕ್ಕೆ ಅಕ್ರಮ ವಲಸಿಗರ ಪ್ರವೇಶವನ್ನು ತಡೆಯಲು ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹೊಸ ನೀತಿಯೊಂದನ್ನು ಘೋಷಿಸಿದ್ದಾರೆ.

ನೀವು ಇಲ್ಲಿ ಅತಿಕ್ರಮವಾಗಿ ಬಂದು ಉಳಿದುಕೊಳ್ಳಲು, ಮಾನವಹಕ್ಕುಗಳನ್ನು ಬಳಸಿಕೊಂಡು ರಕ್ಷಣೆ ಪಡೆಯುವುದು ಸಾಧ್ಯವಿಲ್ಲ ಎಂದು ಟ್ವಿಟ್ಟರ್‌ನಲ್ಲಿ ರಿಷಿ ಸುನಕ್ ಬರೆದುಕೊಂಡಿದ್ದಾರೆ.

ದೇಶದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಉಲ್ಬಣಗೊಳ್ಳುತ್ತಿದ್ದು, ಅಕ್ರಮ ವಲಸಿಗರನ್ನು ನಾವು ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ನಿಮ್ಮ ದೇಶ ಸುರಕ್ಷಿತವಾಗಿದ್ದರೂ, ಸುರಕ್ಷಿತವಾಗಿರದಿದ್ದರೂ ಸರಿ ಅಕ್ರಮ ವಲಸಿಗರನ್ನು ನಾವು ವಾರದೊಳಗಾಗಿ ಹೊರದಬ್ಬುತ್ತೇವೆ. ಒಮ್ಮೆ ಹೊರ ಹಾಕಿ ನಿಷೇಧಕ್ಕೊಳಪಟ್ಟ ವ್ಯಕ್ತಿಗಳಿಗೆ ಅಮೆರಿಕ ಮತ್ತು ಅಸ್ಟ್ರೇಲಿಯಾಕ್ಕೆ ಪ್ರವೇಶ ಇರುವುದಿಲ್ಲ ಎಂದಿದ್ದಾರೆ.

ಬ್ರಿಟೀಷ್ ಕಾಲುವೆ ಮೂಲಕ ದೋಣಿಗಳಲ್ಲಿ ದೇಶದ ಗಡಿ ನುಸುಳುವ ವಲಸಿಗರ ಮೇಲೆ ಅಕ್ರಮ ವಲಸೆ ಕಾಯ್ದೆಯ ಅಡಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಾಯ್ದೆಯಡಿ, ಸಚಿವ ಸುಯೆಲ್ಲಾ ಬ್ರಾವರ್ ಅವರಿಗೆ ನೂತನ ಜವಬ್ದಾರಿ ನೀಡಲಾಗುತ್ತಿದೆ. ಕಾಲುವೆ ಮೂಲಕ ನುಸುಳುವ ಎಲ್ಲಾ ಅಕ್ರಮ ವಲಸಿಗರ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನಮ್ಮ ಸಹಾಯದ ಅಗತ್ಯವಿರುವವರಿಗೆ ಇದು ಅನ್ಯಾಯ ಎನಿಸಬಹುದು. ಆದರೆ ಅಕ್ರಮ ವಲಸಿಗರಿಂದ ನಮ್ಮ ಆಶ್ರಯ ತಾಣಗಳು ನಶಿಸುತ್ತಿವೆ ಎಂದು ಅಕ್ರೋಶ ಹೊರಹಾಕಿದ್ದಾರೆ.

ಕಳೆದ ವರ್ಷ 45,000 ವಲಸಿಗರು ದೋಣಿಗಳ ಮೂಲಕ ಅತಿಕ್ರಮ ಪ್ರವೇಶ ಮಾಡಿದ್ದಾರೆ. 2018 ರಿಂದ ಪ್ರತಿ ವರ್ಷ 60% ರಷ್ಟು ವಲಸಿಗರ ಪ್ರಮಾಣ ಹೆಚ್ಚಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ರಿಶಿ ಸುನಕ್ ಅವರ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಗುಂಪುಗಳು ವಿರೋಧ ವ್ಯಕ್ತಪಡಿಸಿವೆ. ಈ ಯೋಜನೆ ಸರಿಯಲ್ಲ. ನಿರಾಶ್ರಿತರ ಮೇಲಿನ ದೌರ್ಜನ್ಯ ಎಂಬ ಟೀಕೆಗಳು ಕೇಳಿ ಬಂದಿವೆ.

About Author

Leave a Reply

Your email address will not be published. Required fields are marked *

You may have missed