ಸಂಸತ್ತಿನಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಲೈಂಗಿಕ ಕಿರುಕುಳ:ಆಸ್ಟ್ರೇಲಿಯಾ ಸಂಸದೆ ಲಿಡಿಯಾ ಥೋರ್ಪೆ ಆರೋಪ

0

ಸಿಡ್ನಿ: ಸಂಸತ್ತಿನಲ್ಲಿ ತಮ್ಮ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಹಾಗೂ ಸಂಸತ್‌ ಕಟ್ಟಡ ಮಹಿಳೆಯರಿಗೆ ಕೆಲಸ ಮಾಡಲು ಸುರಕ್ಷಿತ ಸ್ಥಳವಲ್ಲ ಎಂದು ಆಸ್ಟ್ರೇಲಿಯಾದ ಸ್ವತಂತ್ರ ಸಂಸದೆ ಲಿಡಿಯಾ ಥೋರ್ಪೆ ಗಂಭಿರ ಆರೋಪ ಮಾಡಿದ್ದಾರೆ.

ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಅವರು, ಮೆಟ್ಟಿಲುಗಳ ಅಡಿಯಲ್ಲಿ ನಡೆದ ಘಟನೆಯಲ್ಲಿ ತಮ್ಮ ಕುರಿತಂತೆ ಲೈಂಗಿಕ ನಿಂದನೀಯ ಹೇಳಿಕೆಗಳನ್ನು ಮಾಡಲಾಯಿತು ಹಾಗೂ ತನ್ನನ್ನು ಕೆಟ್ಟ ಉದ್ದೇಶದಿಂದ ಕೆಲ ‘ಪ್ರಭಾವಿ ವ್ಯಕ್ತಿಗಳು’ ಸ್ಪರ್ಶಿಸಿದ್ದರು ಎಂದಿದ್ದಾರೆ.

ಬುಧವಾರ ಥೋರ್ಪೆ ಅವರು ಸಹ ಸೆನೆಟರ್‌ ವಿರುದ್ಧ ಲೈಂಗಿಕ ಹಲ್ಲೆ ಆರೋಪ ಹೊರಿಸಿದ್ದರೂ ಸಂಸದೀಯ ನಿರ್ಬಂಧದ ಬೆದರಿಕೆ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದರು. ಆದರೆ ಗುರುವಾರ ಮತ್ತೆ ತನ್ನ ಆರೋಪವನ್ನು ಪುನರುಚ್ಛರಿಸಿದ ಥೋರ್ಪೆ, ಸೆನೆಟರ್‌ ಡೇವಿಡ್‌ ವ್ಯಾನ್‌ ಅವರತ್ತ ಬೊಟ್ಟು ಮಾಡಿದ್ದಾರೆ. ಆದರೆ ಡೇವಿಡ್‌ ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಆರೋಪಗಳಿಂದ ಆಘಾತವಾಗಿದೆ ಅವು ಅಪ್ಪಟ ಸುಳ್ಳು ಎಂದು ಅವರು ಹೇಳಿದ್ದರೂ ಅವರ ಲಿಬರಲ್‌ ಪಕ್ಷ ಅವರನ್ನು ಅಮಾನತುಗೊಳಿಸಿದೆ.

About Author

Leave a Reply

Your email address will not be published. Required fields are marked *

You may have missed