ಭೀಕರ ಸ್ಫೋಟಕ್ಕೆ 27 ಜನರು ಬಲಿ

0

ಸೊಮಾಲಿಯಾದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 27 ಜನರು ಸಾವನ್ನಪ್ಪಿದ್ದು 53ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳಿದ್ದಾರೆ ಎನ್ನಲಾಗುತ್ತಿದೆ.

ವರದಿಯ ಪ್ರಕಾರ, ಸೊಮಾಲಿಯಾದ ಲೋವರ್ ಶಾಬೆಲ್ಲೆ ಪ್ರದೇಶದ ಕೊರಿಯೊಲಿ ಪಟ್ಟಣದ ಬಳಿ ಮಾರ್ಟರ್ ಶೆಲ್ ಸ್ಫೋಟಗೊಂಡ ಕಾರಣ ಅಪಘಾತ ಸಂಭವಿಸಿದ್ದು, ಬಾಂಬ್‌ಗಳು ಹಾಗೂ ನೆಲಬಾಂಬ್‌ಗಳಂತಹ ಸ್ಫೋಟಕ ಅವಶೇಷಗಳು ಸ್ಫೋಟಗೊಂಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಕೊರ್ಯೋಲಿ ನಗರದ ಅಪರ ಜಿಲ್ಲಾಧಿಕಾರಿ ಅಬ್ದಿ ಅಹ್ಮದ್ ಅಲಿ ತಿಳಿಸಿದ್ದಾರೆ.

 

ಅಪಘಾತದ ಸಮಯದಲ್ಲಿ, ಹಳ್ಳಿಯ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದು, ಹೆಚ್ಚಿನ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆಲವರು ತುರ್ತಾಗಿ ಚಿಕಿತ್ಸೆಗಾಗಿ ಕೊರೊಳ್ಳೆಯ ಆಸ್ಪತ್ರೆಗೆ ಕರೆದೊಯ್ದಿದ್ದು ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಮೃತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ವಾಸ್ತವವಾಗಿ ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಅಹ್ಮದ್ ಅಲಿ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed