ಅತಿ ಹೆಚ್ಚು ನಿರಾಶ್ರಿತರಿಗೆ ಪಾಕಿಸ್ತಾನ ಆಶ್ರಯ ನೀಡಿದೆ: ಅಧ್ಯಕ್ಷ ಆರಿಫ್ ಅಲ್ವಿ

0

ಸ್ಲಾಮಾಬಾದ್: ಪಾಕಿಸ್ತಾನ ಅತಿ ಹೆಚ್ಚು ನಿರಾಶ್ರಿರನ್ನು ಹೊಂದಿರುವ ರಾಷ್ಟ್ರವಾಗಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ತಿಳಿಸಿದ್ದಾರೆ.

ವಿಶ್ವ ನಿರಾಶ್ರಿತರ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು ‘ಕಳೆದ ನಾಲ್ಕು ದಶಕಗಳಲ್ಲಿ ಲಕ್ಷಾಂತರ ಆಫ್ಘನ್ ನಿರಾಶ್ರಿತರಿಗೆ ಆತಿಥ್ಯ ನೀಡುವಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಜನರು ನೀಡಿದ ಅಪಾರ ಕೊಡುಗೆಗಳನ್ನು ಈ ದಿನ ನಾವು ನೆನಪಿಸಿಕೊಳ್ಳುತ್ತೇವೆ’ ಎಂದಿದ್ದಾರೆ.

ಸಂಪನ್ಮೂಲಗಳ ಕೊರತೆ ಇದ್ದರೂ ಹೆಚ್ಚಿನ ಸಂಖ್ಯೆಯ ನಿರಾಶ್ರಿತ ಜನರಿಗೆ ಆಶ್ರಯ ನೀಡುವ ಪ್ರಯತ್ನವನ್ನು ಪಾಕಿಸ್ತಾದ ದೇಶ ಮಾಡಿದೆ. ಇದು ಮಾನವೀಯ ಪ್ರಯತ್ನಗಳು, ಸಹೋದರತ್ವ ಮತ್ತು ಸಹಾನುಭೂತಿಯ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಅಲ್ವಿ ತಿಳಿಸಿದ್ದಾರೆ.

40 ವರ್ಷಗಳಿಂದ ನಿರಾಶ್ರಿತರು ಮತ್ತು ಆತಿಥೇಯ ಸಮುದಾಯಗಳ ನಡುವೆ ಯಾವುದೇ ಘರ್ಷಣೆ ನಡೆದಿಲ್ಲ. ಪರಸ್ಪರ ಸಾಮರಸ್ಯ, ಸಹಬಾಳ್ವೆಗೆ ಉದಾಹರಣೆಯಾಗಿದೆ. ನಿರಾಶ್ರಿತರಿಗೆ ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕ್‌ ಖಾತೆಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅಲ್ವಿ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed