ತನ್ನ ನಾಲಿಗೆ ಚೀಪು ಎಂದಿದ್ದ ದಲೈ ಲಾಮ: ಬಾಲಕ ಹಾಗೂ ಕುಟುಂಬದ ಬಳಿ ಕ್ಷಮೆ ಯಾಚನೆ

0

ಟಿಬೆಟಿಯನ್ ಧರ್ಮಗುರು ದಲೈ ಲಾಮ ಬಾಲಕನೊಬ್ಬನಿಗೆ ಮುತ್ತು ಕೊಟ್ಟು ತನ್ನ ನಾಲಿಗೆಯನ್ನು ಚೀಪು ಎಂದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಾಲಕ ಹಾಗೂ ಕುಟುಂಬದ ಬಳಿ ಕ್ಷಮೆ ಕೇಳಿದ್ದಾರೆ.

ಬಾಲಕೊಬ್ಬನ ಬಾಯಿಗೆ ಮುತ್ತಿಟ್ಟು ತನ್ನ ನಾಲಿಗೆಯನ್ನು ಚೀಪುವಂತೆ ದಲೈಲಾಮ ಹೇಳಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ದಲೈಲಾಮಾ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದಲೈಲಾಮ ಕ್ಷಮೆಯಾಚಿಸಿದ್ದಾರೆ.

ಬೌದ್ಧರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಮಗುವೊಂದು ದಲೈಲಾಮಾ ಅವರನ್ನು ಅಪ್ಪಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿತ್ತು ಎಂದು ಹೇಳಲಾಗಿದೆ. ನಂತರ ದಲೈಲಾಮಾ ಮಗುವನ್ನು ಕರೆದು, ಮಗುವಿನೊಂದಿಗೆ ಮಾತನಾಡುತ್ತ, ಮೊದಲು ಅವನ ತುಟಿಗಳನ್ನು ಚುಂಬಿಸಿದರು ಮತ್ತು ನಂತರ ಅವರ ನಾಲಿಗೆಯನ್ನು ಹೊರತೆಗೆದು ನನ್ನ ನಾಲಿಗೆಯನ್ನು ನೆಕ್ಕುವಂತೆ ಹೇಳಿದ್ದರು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ದಲೈ ಲಾಮಾ, ತಾನು ಭೇಟಿಯಾಗುವ ಜನರ ಬಳಿ ಆಗಾಗ ತಮಾಷೆ ಮಾಡುತ್ತಾ ಕೀಟಲೆ ಮಾಡುತ್ತಿರುತ್ತೇನೆ ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

You may have missed