ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಬಸ್ ಡಿಕ್ಕಿ ಹೊಡೆದು ಭಾರತೀಯ ಮೂಲದ ವ್ಯಕ್ತಿ ನಿಧನ

0

ನ್ಯೂಯಾರ್ಕ್: ಬೋಸ್ಟನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸ್ ಡಿಕ್ಕಿಯಾಗಿ ಪರಿಣಾಮ 47 ವರ್ಷದ ಭಾರತೀಯ-ಅಮೆರಿಕನ್ ಡೇಟಾ ವಿಶ್ಲೇಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶ ಮೂಲದ 47 ವರ್ಷದ ವಿಶ್ವಚಂದ್ ಕೊಲ್ಲಾ ಮೃತ ದುರ್ದೈವಿ. ವಿಶ್ವಚಂದ್ ಇಲ್ಲಿನ ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ವರದಿಯ ಪ್ರಕಾರ, ವಿಶ್ವಚಂದ್ ಕೊಲ್ಲಾ ತಮ್ಮ ಸ್ನೇಹಿತನನ್ನು ಕರೆದುಕೊಂಡು ಹೋಗಲು ಬಂದಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಕೊಲ್ಲಾ ಟಕೆಡಾ ಕಂಪನಿಯ ಜಾಗತಿಕ ಆಂಕೊಲಾಜಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ವಿಶ್ವಚಂದ್ ನಿಧನಕ್ಕೆ ಟಕೆಡಾ ಇಂಡಸ್ಟ್ರೀಸ್ ಇಮೇಲ್‌ನಲ್ಲಿ ವಿಷಾದ ವ್ಯಕ್ತಪಡಿಸಿದೆ.

ಏತನ್ಮಧ್ಯೆ, ಕೊಲ್ಲಾ ಅವರ ಸಂಬಂಧಿಕರು ಅವರ ಕುಟುಂಬಕ್ಕೆ ಸಹಾಯ ಮಾಡಲು US $ 750,000 ಸಂಗ್ರಹಿಸುವ ಗುರಿಯೊಂದಿಗೆ ‘ಗೋ ಫಂಡ್ ಮಿ’ ಪುಟವನ್ನು ಸ್ಥಾಪಿಸಿದ್ದು ಇದುವರೆಗೆ US $ 406,151 ಸಂಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed