ಅಲಾಸ್ಕಾದ ಬಾನಿನಲ್ಲಿ ಹಾರುತ್ತಿದ್ದ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

0

ವಾಷಿಂಗ್ಟನ್‌: ಅಲಾಸ್ಕಾದ ಉತ್ತರ ಕರಾವಳಿಯಲ್ಲಿ ಸುಮಾರು 40,000 ಅಡಿ ಎತ್ತರದಲ್ಲಿ ಪರಿಕರಗಳೊಂದಿಗೆ ಹಾರಾಟ ನಡೆಸುತ್ತಿದ್ದ ಸಣ್ಣ ಕಾರಿನ ಗಾತ್ರದ ವಸ್ತುವನ್ನು ಅಧ್ಯಕ್ಷ ಜೋ ಬೈಡನ್‌ ಅವರ ನಿರ್ದೇಶನದ ಮೇರೆಗೆ ಅಮೆರಿಕದ ಫೈಟರ್ ಜೆಟ್‌ಗಳು ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಈ ಬಗ್ಗೆ ಮಾಹಿತಿ ನೀಡಿರುವ ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್, ಆಕಾಶದಲ್ಲಿ ಹಾರಾಡುತ್ತಿದ್ದ ವಸ್ತುವಿನ ಮೂಲವು ಇಲ್ಲಿಯವರೆಗೆ ಗೊತ್ತಾಗಿಲ್ಲ. ಗುರುವಾರ ಅಮೆರಿಕದ ವಾಯುಪ್ರದೇಶದಲ್ಲಿ ಮೊದಲ ಬಾರಿಗೆ ಅದು ಪತ್ತೆಯಾಗಿತ್ತು. ನಾಗರಿಕ ವಿಮಾನ ಸಂಚಾರಕ್ಕೆ ಅದು ಬೆದರಿಕೆಯೊಡ್ಡುವ ಸಾಧ್ಯತೆಗಳಿದ್ದ ಕಾರಣಕ್ಕೆ ಹೊಡೆದುರುಳಿಸಲಾಗಿದೆ’ ಎಂದಿದ್ದಾರೆ.

‘ಅಮೆರಿಕದ ಉತ್ತರ ಕಮಾಂಡ್ ಈಗ ವಸ್ತುವಿನ ಪತ್ತೆ ಕಾರ್ಯ ಆರಂಭಿಸಿದೆ’ ಎಂದು ರೈಡರ್ ಹೇಳಿದರು. ಹಾರಾಡುತ್ತಿದ್ದ ವಸ್ತುವಿಗೆ ಎಫ್‌-22 ಫೈಟರ್ ಜೆಟ್ ಎಐಎಂ-9ಎಕ್ಸ್‌ ಕ್ಷಿಪಣಿಯನ್ನು ಗುರಿ ಮಾಡಿ ಹೊಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. .

ಅಟ್ಲಾಂಟಿಕ್ ಮಹಾಸಾಗರದ ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ಒಂದು ವಾರದ ಒಳಗೇ ಈ ಘಟನೆ ನಡೆದಿದೆ.

About Author

Leave a Reply

Your email address will not be published. Required fields are marked *

You may have missed