ನಾಲ್ಕು ವರ್ಷಗಳ ಬಳಿಕ ಪತ್ತೆಯಾಯ್ತು ವಿಮಾನ ನಿಲ್ದಾಣದಲ್ಲಿ ಕಾಣೆಯಾದ ಲಗೇಜ್

0

ಚಿಕಾಗೋ: ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಕಾಣೆಯಾಗುವುದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಕಾಣೆಯಾದ ಲಗೇಜು ಕೆಲವು ದಿನ ಬಿಟ್ಟು ಸಿಗುತ್ತದೆ, ಕೆಲವೊಮ್ಮೆ ಸಿಗದೇ ಇರಲೂಬಹುದು. ಆದರೆ ಇಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು ಅಮೆರಿಕದ ಮಹಿಳೆಯೊಬ್ಬರು ನಾಲ್ಕು ವರ್ಷದ ಹಿಂದೆ ವಿಮಾನದಲ್ಲಿ ಕಳೆದುಕೊಂಡ ಲಗೇಜೊಂದು ಮತ್ತೆ ಮಹಿಳೆಯ ಕೈಸೇರುವಂತಾಗಿದೆ.

 

ನಾಲ್ಕು ವರ್ಷದ ಹಿಂದೆ ಒರೆಗಾನ್‌ನ ನಿವಾಸಿ ಎಪ್ರಿಲ್ ಗೇವಿನ್ ಅವರು ಪ್ರವಾಸಕ್ಕಾಗಿ ಚಿಕಾಗೋಗೆ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣ ಬೆಳೆಸಿದರು. ಆ ಸಂದರ್ಭದಲ್ಲಿ ಅವರ ಸೂಟ್ ಕೇಸ್ ಕಾಣೆಯಾಗಿತ್ತು ಈ ಕುರಿತು ವಿಮಾನಯಾನ ಸಂಸ್ಥೆಗೂ ಮಹಿಳೆ ದೂರು ನೀಡಿದ್ದರು, ಅಲ್ಲದೆ ತನ್ನ ಸೂಟ್ ಕೇಸ್ ಕಾಣೆಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದನ್ನು ಪೋಸ್ಟ್ ಮಾಡಿದ್ದರು ಆದರೂ ಸೂಟ್ ಕೇಸ್ ಮಾತ್ರ ಪತ್ತೆಯಾಗಿರಲಿಲ್ಲ.

ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ವರ್ಷದ ಬಳಿಕ ಟೆಕ್ಸಾಸ್‌ನ ಹೂಸ್ಟನ್‌ ನಿಂದ ಮಹಿಳೆಯ ಮೊಬೈಲ್ ಗೆ ಕರೆಯೊಂದು ಬಂದಿದ್ದು ಸೂಟ್ ಕೇಸ್ ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ ಇದರಿಂದ ಆಶ್ಚರ್ಯಗೊಂಡಿರುವ ಮಹಿಳೆ ನನ್ನ ಸೂಟ್ ಕೇಸ್ ಕಳೆದ ನಾಲ್ಕು ವರ್ಷಗಳಿಂದ ಯುನೈಟೆಡ್ ಏರ್‌ಲೈನ್ಸ್ ನಲ್ಲಿ ಸುತ್ತಾಡುತ್ತಿತ್ತು ಈಗ ನನ್ನ ಕೈ ಸೇರುವ ಸಮಯ ಬಂದಿದೆ ಹಾಗಾಗಿ ಯುನೈಟೆಡ್ ಏರ್‌ಲೈನ್ಸ್ ಗೆ ನನ್ನ ಧನ್ಯವಾದಗಳು ಎಂದು ಮಹಿಳೆ ಬರೆದುಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed