ಚೀನಾದ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ: ಇಬ್ಬರು ಸಾವು, 12 ಮಂದಿ ನಾಪತ್ತೆ

0

ಬೀಜಿಂಗ್: ಈಶಾನ್ಯ ಚೀನಾದ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ.

ರಾಜಧಾನಿ ಬೀಜಿಂಗ್‌ನ ಪೂರ್ವದಲ್ಲಿರುವ ಲಿಯಾನಿಂಗ್ ಪ್ರಾಂತ್ಯದ ಪಂಜಿನ್ ನಗರದ ಹೊರವಲಯದಲ್ಲಿ ಭಾನುವಾರ ನಡೆದ ಸ್ಫೋಟದಲ್ಲಿ ಒಟ್ಟು 34 ಮಂದಿ ಗಾಯಗೊಂಡಿದ್ದಾರೆ.

 

ಸ್ಥಳೀಯ ಆಡಳಿತ ಬಿಡುಗಡೆ ಮಾಡಿರುವ ಫೋಟೊಗಳಲ್ಲಿ, ರಾಸಾಯನಿಕ ಸಂಸ್ಕರಣಾ ಯಂತ್ರಗಳು, ಪೈಪ್‌ಗಳು ಮತ್ತು ಶೇಖರಣಾ ಪಾತ್ರೆಗಳ ಸಂಕೀರ್ಣದಿಂದ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಏರುತ್ತಿರುವುದನ್ನು ಕಾಣಬಹುದು.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಸ್ಥಳೀಯ ಪರಿಸರ ಇಲಾಖೆಯು ಪ್ರದೇಶದಲ್ಲಿನ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ನಗರದ ಉಪನಗರದಲ್ಲಿರುವ ಪನ್ಶನ್ ಕೌಂಟಿಯ ಆಡಳಿತ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಗೆ ಕಾರಣ ತಿಳಿದುಬಂದಿಲ್ಲ. ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed