ನೇಪಾಳ: ಪತನಗೊಂಡಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ

0

ಠ್ಮಂಡು: ನೇಪಾಳದಲ್ಲಿ ನಿನ್ನೆ 72 ಜನರ ಸಜೀವ ಆಹುತಿಗೆ ಕಾರಣವಾದ ಪತನಗೊಂಡ ಯೇತಿ ಏರ್ ಲೈನ್ಸ್ ಪ್ರಯಾಣಿಕ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಠ್ಮುಂಡುವಿನಿಂದ ಆಗಮಿಸಿದ ಅವಳಿ ಎಂಜಿನ್ ಎಟಿಆರ್72 ವಿಮಾನವು ಪೋಖರಾದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮೊದಲು ಪತನಗೊಂಡಿದೆ.

ಅಪಘಾತಗೊಂಡ ಸ್ಥಳದಿಂದ ಇಲ್ಲಿಯವರೆಗೆ 68 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ವಿಮಾನವು ಪತನಗೊಳ್ಳುವ ಮೊದಲ ಪ್ರಮುಖ ಮಾಹಿತಿಗಳನ್ನು ಹೊಂದಿರುವ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಲ್ಯಾಕ್ ಬಾಕ್ಸ್ ವಿಮಾನದ ಡೇಟಾ ರೆಕಾರ್ಡರ್ ಆಗಿದ್ದು, ಅದು ವಿಶೇಷ ಅಲ್ಗಾರಿದಮ್ ಮೂಲಕ ವಿಮಾನದ ಎಲ್ಲಾ ಮಾಹಿತಿಗಳನ್ನು ದಾಖಲಿಸುತ್ತದೆ.

ಅಪಘಾತಗೊಂಡ ವಿಮಾನಗಳ ಕೊನೆಕ್ಷಣದ ಮಾಹಿತಿ ಪಡೆಯಲು ಈ ಬ್ಲ್ಯಾಕ್ ಬಾಕ್ಸ್’ನ್ನು ಬಳಸಲಾಗುತ್ತದೆ. 1950 ರ ದಶಕದಿಂದಲೇ ವಿಮಾನ ಅಪಘಾತಗಳ ಕಾರಣಗಳನ್ನು ಪತ್ತೆಹಚ್ಚುವಲ್ಲಿ ಬ್ಲ್ಯಾಕ್ ಬಾಕ್ಸ್ ಅಥವಾ ಕಪ್ಪು ಪೆಟ್ಟಿಗೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಆಸ್ಟ್ರೇಲಿಯಾದ ವಿಜ್ಞಾನಿ ಡೇವಿಡ್ ವಾರೆನ್ ಅವರು ವಿಮಾನದಲ್ಲಿನ ಭದ್ರತಾ ಲೋಪ ದೋಷಗಳನ್ನು ಗುರುತಿಸಲು ಬ್ಲ್ಯಾಕ್ ಬಾಕ್ಸ್ ಪರಿಕಲ್ಪನೆಯನ್ನು ಅಭಿವೃದ್ದಿಪಡಿಸಿದರು. ವಿಮಾನದ ಕಪ್ಪು ಪೆಟ್ಟಿಗೆಯು ಇವುಗಳು ರೆಕಾರ್ಡರ್ಗಳನ್ನು ಒಳಗೊಂಡಿರುವ ಎರಡು ದೊಡ್ಡ ಲೋಹದ ಪೆಟ್ಟಿಗೆಗಳಾಗಿವೆ. ಸಾಮಾನ್ಯವಾಗಿ ವಿಮಾನವೊಂದರಲ್ಲಿ ಎರಡು ಇಂತಹ ಪೆಟ್ಟಿಗೆಗಳು ಇರುತ್ತವೆ.
ವಿಮಾನ ಪತನ ದುರಂತದಲ್ಲಿ ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ ಯಾರೂ ಕೂಡ ಬದುಕುಳಿದಿಲ್ಲ ಎಂದು ನೇಪಾಳ ಸೇನೆ ಮಾಹಿತಿ ನೀಡಿದೆ. ನಮಗೆ ಜೀವಂತವಾಗಿ ಯಾರನ್ನೂ ಉಳಿಸಲು ಸಾಧ್ಯವಾಗಲಿಲ್ಲ ಎಂದು ನೇಪಾಳದ ಸೇನೆಯ ವಕ್ತಾರ ಕೃಷ್ಣ ಪ್ರಸಾದ್ ಭಂಡಾರಿ ಮಾಹಿತಿ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed