ಇಂಡೋನೇಷ್ಯಾದಲ್ಲಿ 6.2 ತೀವ್ರತೆಯ ಭೂಕಂಪ: ಸುನಾಮಿಯ ಎಚ್ಚರಿಕೆ

0

ಕಾರ್ತ: ಇಂದು ಮುಂಜಾನೆ ಪಶ್ಚಿಮ ಇಂಡೋನೇಷ್ಯಾದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ.

ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಕರಾವಳಿಯಲ್ಲಿ ಭೂಕಂಪ ಉಂಟಾಗಿದೆ. ಅದರ ಕೇಂದ್ರಬಿಂದುವನ್ನು ಆಚೆ ಪ್ರದೇಶದ ಸಿಂಗಿಲ್ ನಗರದಲ್ಲಿ 48 ಕಿ.ಮೀ ಆಳದಲ್ಲಿದೆ ಪತ್ತೆಹಚ್ಚಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿಯಲ್ಲಿ ತಿಳಿಸಿದೆ.

 

ಇಂದು ಮುಂಜಾನೆ ಸ್ಥಳೀಯ ಕಾಲಮಾನ 6:30ರ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವು-ನೋವು ಅಥವಾ ಗಂಭೀರ ಹಾನಿಗಳು ಸಂಭವಿಸಿರುವುದಾಗಿ ವರದಿಯಾಗಿಲ್ಲ. ಸದ್ಯ ಸುನಾಮಿಯ ಎಚ್ಚರಿಕೆಯನ್ನೂ ನೀಡಲಾಗಿಲ್ಲ.

ಕಳೆದ ವರ್ಷ ನವೆಂಬರ್ 21 ರಂದು ಇಂಡೋನೇಷ್ಯಾದ ಪಶ್ಚಿಮ ಜಾವಾದ ಸಿಯಾಂಜೂರ್ ನಗರದಲ್ಲಿ ಸಂಭವಿಸಿದ 5.6 ತೀವ್ರತೆಯ ಭೂಕಂಪದಲ್ಲಿ 331 ಜನರು ಸಾವನ್ನಪ್ಪಿದ್ದರು. ಸುಮಾರು 600 ಜನರು ಗಾಯಗೊಂಡಿದ್ದರು. 2018ರಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯಿಂದಾಗಿ ಸುಲಾವೆಸಿಯಲ್ಲಿ 4,340 ಜನರು ಸಾವನ್ನಪ್ಪಿದ್ದರು. ಆ ಬಳಿಕ ಸೋಮವಾರ ಸಂಭವಿಸಿದ ಭೂಕಂಪ ಇಂಡೋನೇಷ್ಯಾದ ಅತ್ಯಂತ ಪ್ರಬಲ ಭೂಕಂಪವಾಗಿದೆ.

About Author

Leave a Reply

Your email address will not be published. Required fields are marked *

You may have missed