ನಟ ಧನುಷ್ ಡಿವೋರ್ಸ್ ಗೆ ಕಾರಣ ನಾನಲ್ಲ: ನಟಿ ಶ್ರುತಿ ಹಾಸನ್

0

ಮಿಳಿನ ಖ್ಯಾತ ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಇತ್ತೀಚೆಗೆ ದೂರವಾಗಿದ್ದಾರೆ. ಇಬ್ಬರ ನಡುವಿನ ಮನಸ್ತಾಪದಿಂದ ಡಿವೋರ್ಸ್ ಪಡೆದುಕೊಂಡಿದ್ದು ಈ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿತ್ತು. ಧನುಷ್ ಹಾಗೂ ಐಶ್ವರ್ಯ ದೂರವಾಗಲು ನಟಿ ಶೃತಿ ಹಾಸನ್ ಕಾರಣ ಎಂದು ಹೇಳಲಾಗಿತ್ತು.

ಆದರೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಶ್ರುತಿ ಹಾಸನ್ ಧನುಷ್ ಡಿವೋರ್ಸ್ ಗೆ ಕಾರಣ ತಾನಲ್ಲ ಎಂದಿದ್ದಾರೆ.

ಧನುಷ್ ಮತ್ತು ಐಶ್ವರ್ಯ ಡಿವೋರ್ಸ್ ಕುರಿತು ಪ್ರತಿಕ್ರಿಯಿಸಿರುವ ಶ್ರುತಿ ಹಾಸನ್, ‘ಅವರ ಬದುಕಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ಕಾರಣದಿಂದಾಗಿ ದೂರವಾಗಿಲ್ಲ. ನಾನು ಮತ್ತು ಧನುಷ್ ಒಳ್ಳೆಯ ಸ್ನೇಹಿತರು ನಿಜ. ಅದು ಕೇವಲ ವೃತ್ತಿ ಸ್ನೇಹವಾಗಿತ್ತು. ನನ್ನ ಕಷ್ಟದ ದಿನಗಳಲ್ಲಿ ಅವರು ಸಹಾಯ ಮಾಡಿದ್ದಾರೆ. ಅದರಾಚೆ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಧನುಷ್ ಹಾಗೂ ಶ್ರುತಿ ಹಾಸನ್ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಲ್ಲದೆ ಈ ಜೋಡಿ ಹಿಟ್ ಪೇರ್ ಎನಿಸಿಕೊಂಡಿತ್ತು.

About Author

Leave a Reply

Your email address will not be published. Required fields are marked *

You may have missed