`ಸಹಕರಿಸುವಂತೆ ಸಹನಿರ್ಮಾಪಕನಿಂದ ಇ-ಮೇಲ್ ಸಂದೇಶ: ಬೆಂಗಾಳಿ ನಟಿ ಸ್ವಸ್ತಿಕಾ ದೂರು

0

ಕೋಲ್ಕತ್ತ: ಬೆಂಗಾಳಿ ಚಿತ್ರರಂಗದ ಖ್ಯಾತ ನಟಿ ಸ್ವಸ್ತಿಕಾ ಮುಖರ್ಜಿ ತಮ್ಮ ಮುಂದಿನ ಸಿನಿಮಾ ‘ಶಿಬ್‌ಪುರ್’ ಚಿತ್ರದ ಸಹನಿರ್ಮಾಪಕ ಸಂದೀಪ್ ಸರ್ಕಾರ್ ಹಾಗೂ ಆತನ ಸಹವರ್ತಿಗಳು ಇ-ಮೇಲ್‌ಗಳಲ್ಲಿ ಬೆದರಿಕೆ ಹಾಕುತ್ತಿದ್ದು, ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ತಮ್ಮ ಜೊತೆ ಸಹಕರಿಸಬೇಕು ಎಂದು ಒತ್ತಾಯಿಸಿ ‘ಶಿಬ್‌ಪುರ್’ ಚಿತ್ರದ ಸಹನಿರ್ಮಾಪಕ ಸಂದೀಪ್ ಸರ್ಕಾರ್ ಹಾಗೂ ಆತನ ಸಹವರ್ತಿಗಳು ಮೇಲ್‌ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದಾಗಿ ಸ್ವಸ್ತಿಕಾ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು.

ಇಲ್ಲಿನ ಗಾಲ್ಫ್ ಗ್ರೀನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಹಕರಿಸದಿದ್ದರೆ ನಿಮ್ಮ ಬೆತ್ತಲೆ ಚಿತ್ರ ಹಾಗೂ ವಿಡಿಯೊಗಳನ್ನು ಪೋರ್ನ್ ವೆಬ್‌ಸೈಟುಗಳಲ್ಲಿ ಅಪ್‌ಲೋಡ್‌ ಮಾಡಲಾಗುವುದು ಎಂದು ಸಹನಿರ್ಮಾಪಕ ಹೇಳಿದ್ದಾಗಿ ಸ್ವಸ್ತಿಕಾ ಆರೋಪಿಸಿದ್ದಾರೆ.

ಸ್ವಸ್ಥಿಕಾ ಮಾಡಿರುವ ಆರೋಪದ ಕುರಿತು ಇದುವರೆಗೂ ಸಂದೀಪ್ ಸರ್ಕಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮ್ಮೊಟ್ಟಿಗೆ ಶಿಬ್ತುರ್ ಸಿನಿಮಾದ ಮತ್ತೊಬ್ಬ ಸಹ ನಿರ್ಮಾಪಕ ಅಜಂತಾ ಸಿನ್ಹಾ ರಾಯ್ ಅವರೇ ಸಂಪರ್ಕ ಮಾಡುತ್ತಿದ್ದರು. ಆದರೆ ಸಿನಿಮಾದ ಶೂಟಿಂಗ್ ಎಲ್ಲ ಮುಗಿದ ಮೇಲೆ ಒಮ್ಮೆಲೆ ಹಠಾತ್ ಆಗಿ ಸಂದೀಪ್ ಸರ್ಕಾರ್ ಕಡೆಯಿಂದ ಇ-ಮೇಲ್​ಗಳು ಬರಲು ಪ್ರಾರಂಭವಾದವು. ನಾನು ಅಮೆರಿಕದ ನಿವಾಸಿಯಾಗಿದ್ದು, ನೀನು ನನ್ನೊಟ್ಟಿಗೆ ‘ಸಹಕರಿಸದಿದ್ದರೆ’ ನಿನಗೆ ಅಮೆರಿಕ ವೀಸಾ ದೊರೆಯದಂತೆ ಮಾಡುತ್ತೇನೆ, ನನಗೆ ಪೊಲೀಸ್ ಆಯುಕ್ತರು ಗೊತ್ತು, ಸ್ಟೇಷನ್​ಗೆ ಅಲೆಯುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ನಟಿ ಸ್ವಸ್ತಿಕಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed