ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ ಇಲಿಯಾನಾ

0

ಬಾಲಿವುಡ್ ನಟಿ ಇಲಿಯಾನಾ ಇತ್ತೀಚಿಗೆ ತಾಯಿಯಾಗುತ್ತಿರುವ ಸುದ್ದಿ ತಿಳಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಮದುವೆಯಾಗದೇ ತಾಯಿಯಾಗುತ್ತಿರುವ ಕುರಿತು ಸುದ್ದಿ ತಿಳಿಸಿದಕ್ಕೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಮೊದಲ ಬಾರಿಗೆ ಬೇಬಿ ಬಂಪ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

 

ಸೌತ್- ಬಾಲಿವುಡ್‌ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಇಲಿಯಾನಾ ಅವರು 2019ರಲ್ಲಿ ಆಂಡ್ರ್ಯೂ ನಿಬೋನ್ ಜೊತೆಗಿನ ಬ್ರೇಕಪ್ ಬಳಿಕ ಕತ್ರಿನಾ ಸಹೋದರನ ಜೊತೆ ಒಡನಾಡ ಹೊಂದಿದ್ದಾರೆ. ಪ್ರಸ್ತುತ ಕತ್ರಿನಾ ಕೈಫ್ ಸಹೋದರ ಸಬಾಸ್ಟಿಯನ್ ಲಾರೆಂಟ್ ಮೈಕಲ್ ಜೊತೆ ಇಲಿಯಾನಾ ಡೇಟ್ ಮಾಡುತ್ತಿದ್ದಾರೆ.

ಏ.18ರಂದು ತಾವು ತಾಯಿಯಾಗಿರುವ ಗುಡ್ ನ್ಯೂಸ್‌ನ ನಟಿ ಇಲಿಯಾನಾ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಸಿನಿ ತಾರೆಯರು, ಅಭಿಮಾನಿಗಳು ನಟಿಯ ಪೋಸ್ಟ್‌ಗೆ ವಿಶ್ ಮಾಡಿದ್ದರು. ಇದೀಗ ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

ಪ್ರೆಗೆನ್ಸಿ ಅನೌನ್ಸ್ ಮಾಡಿದ 20 ದಿನಗಳ ಬಳಿಕ ನಟಿ ಫೋಟೋ ಹಂಚಿಕೊಂಡಿದ್ದಾರೆ.

ತಾವು ಮತ್ತೊಮ್ಮೆ ಗರ್ಭಿಣಿ ಎಂದು ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬೇಬಿ ಬಂಪ್ ತೋರಿಸಿ ಕಾಫಿ ಕಪ್ ಹಿಡಿದಿದ್ದು ಸಾಕಷ್ಟು ಮಂದಿ ನಟಿಗೆ ಶುಭ ಹಾರೈಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed