ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ನಟಿ ಶಕೀಲಾ

0

ಸಿನಿಮಾ ಹಾಗೂ ಮಾದಕತೆಯಿಂದ ಸಿನಿ ರಸಿಕರಿಗೆ ಚಿರಪರಿಚಿತರಾಗಿದ್ದ ವಯಸ್ಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಘಳಿಸಿದ್ದ ನಟಿ ಶಕೀಲಾ ದಿನವೊಂದಕ್ಕೆ 4 ಲಕ್ಷ ದುಡಿಯುತ್ತಿದ್ದೆ ಎಂದು ಹೇಳುವ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ಜೀವನ ಮತ್ತು ತಾವು ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ತುಂಬಾ ತಪ್ಪು ಮಾಹಿತಿಗಳಿವೆ. ನನ್ನ ವಿಕಿಪೀಡಿಯಾ ಪುಟದಲ್ಲಿ ನಾನು ಐಷಾರಾಮಿ ಫ್ಲಾಟ್ ಮತ್ತು ಬಿಎಂಡಬ್ಲು ಕಾರ್ ಹೊಂದಿದ್ದೇನೆ ಎಂದು ಹೇಳಲಾಗುತ್ತದೆ. ಆದರೆ ಅದು ನಿಜವಲ್ಲ. ನಾನು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದಿದ್ದಾರೆ.

ವಯಸ್ಕ್ ಸಿನಿಮಾಗಳ ಮೂಲಕ ಗಳಿಸಿದ ಎಲ್ಲಾ ಹಣ ಏನಾಯ್ತು ಎಂದು ವಿವರಿಸಿದ್ದಾರೆ. ದಿನವೊಂದಕ್ಕೆ 4 ಲಕ್ಷ ರೂ. ಗಳಿಸುತ್ತಿದ್ದೆ, ಇಷ್ಟೊಂದು ಜನಪ್ರಿಯತೆ ಇತ್ತು. ಆದರೆ ನನ್ನ ತಂಗಿ ನನ್ನ ಎಲ್ಲಾ ಹಣವನ್ನು ತೆಗೆದುಕೊಂಡಳು, ನನಗಾಗಿ ಏನೂ ಉಳಿದಿರಲಿಲ್ಲ ಎಂದು ಶಕೀಲಾ ನೋವಿನ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ.

ಮದುವೆಯ ಕುರಿತಾಗಿ ಮಾತನಾಡಿದ ನಟಿ, ಮದುವೆಯ ಆಸೆ ಇಲ್ಲದ ಹೆಣ್ಣಿಲ್ಲ, ನನಗೂ ಇತ್ತು. 2 ವರ್ಷದಲ್ಲಿ ಒಬ್ಬರು, 4 ವರ್ಷದಲ್ಲಿ ಒಬ್ಬರು, ಒಂದು ವರ್ಷಕ್ಕೆ ಇನ್ನೊಬ್ಬರು ಎಂದು ಉತ್ತರಿಸಿದರು. ಅಲ್ಲದೆ, ನಾನು ಮಾಡಿದ ಒಂದೇ ತಪ್ಪು ಎಂದರೆ ನನ್ನ ಬಗ್ಗೆ ಯೋಚಿಸುವ ಬದಲು ನನ್ನ ಕುಟುಂಬದ ಬಗ್ಗೆ ಹೆಚ್ಚು ಯೋಚಿಸಿದೆ, ಅದಕ್ಕಾಗಿಯೇ ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿದೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed