ಶಾಲಾ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್​’ ಚಿತ್ರ ತೋರಿಸಲು ಮುಂದಾದ ನಟಿ ಕೃತಿ ಸನೋನ್​

0

ಟ ಪ್ರಭಾಸ್ ಹಾಗೂ ಕೃತಿ ಸನೋನ್ ನಟನೆಯ ಆದಿಪುರುಷ್ ಸಿನಿಮಾ ಸಾಕಷ್ಟು ವಿವಾದ ಹುಟ್ಟುಹಾಕಿದೆ. ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿಬಂದಿಲ್ಲ ಎಂಬ ಕಾರಣಕ್ಕೆ ಚಿತ್ರವನ್ನು ಟ್ರೋಲ್​ ಮಾಡುತ್ತಿದ್ದಾರೆ. ಈ ಮಧ್ಯೆಯೂ ಸಿನಿಮಾವನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ತೋರಿಸಲು ನಟಿ ಕೃತಿ ಸನೋನ್ ಮುಂದಾಗಿದ್ದಾರೆ,

ರಾಮಾಯಣದ ಕಥೆಯನ್ನು ಆಧರಿಸಿದ ಈ ಸಿನಿಮಾದಲ್ಲಿ ಕೃತಿ ಸನೋನ್​ ಅವರು ಸೀತೆಯ ಪಾತ್ರ ಮಾಡಿದ್ದಾರೆ. ಯಾರು ಎಷ್ಟೇ ಟೀಕಿಸಿದರೂ ಕೃತಿ ಸೋನನ್ ಗೆ ಸಿನಿಮಾದ ಮೇಲಿನ ಹೆಮ್ಮೆಯ ಭಾವನೆ ಕುಗ್ಗಿಲ್ಲ. ಆದಿಪುರುಷ್​’ ಚಿತ್ರವನ್ನು ಶಾಲೆಯ ಮಕ್ಕಳಿಗೆ ತೋರಿಸಲು ಅವರು ನಿರ್ಧರಿಸಿದ್ದಾರೆ. ಕೃತಿ ಸನೋನ್​ ಅವರು ಓದಿದ್ದು ದೆಹಲಿ ಪಬ್ಲಿಕ್​ ಸ್ಕೂಲ್​ನಲ್ಲಿ. ಆ ಶಾಲೆಯ ಮಕ್ಕಳಿಗಾಗಿ ಅವರು ದೆಹಲಿಯ ಮಲ್ಟಿಪ್ಲೆಕ್ಸ್​ನಲ್ಲಿ ಒಂದು ಪೂರ್ತಿ ಶೋನ ಟಿಕೆಟ್​ ಬುಕ್​ ಮಾಡಿದ್ದಾರೆ ಎಂದು ವರದಿ ಆಗಿದೆ.

‘ಆದಿಪುರುಷ್​’ ಸಿನಿಮಾವನ್ನು ಮಕ್ಕಳು ಸಖತ್​ ಎಂಜಾಯ್​ ಮಾಡುತ್ತಾರೆ ಎಂಬುದು ಕೃತಿ ಸನೋನ್​ ನಂಬಿಕೆ. ಹಾಗಾಗಿ ತಾವು ಓದಿದ ಶಾಲೆಯ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಅವರು ಮುಂದಾಗಿದ್ದಾರೆ. ಈ ವೇಳೆ ಅವರು ಕೂಡ ಮಕ್ಕಳ ಜೊತೆ ಕುಳಿತು ಸಿನಿಮಾ ವೀಕ್ಷಿಸಲಿದ್ದಾರೆ. ಆ ಬಳಿಕ ಅಲ್ಲಿಯೇ ಸಂವಾದ ಕೂಡ ನಡೆಸಲಿದ್ದಾರೆ. ಅದಕ್ಕಾಗಿ ಮಲ್ಟಿಪ್ಲೆಕ್ಸ್​ನಲ್ಲಿ ಸಕಲ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ಓಂ ರಾವತ್​ ಅವರು ನಿರ್ದೇಶನ ಮಾಡಿದ್ದಾರೆ. ರಾಮನ ಪಾತ್ರವನ್ನು ಪ್ರಭಾಸ್​ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed