ಲೈಂಗಿಕ ಆದ್ಯತೆಗಳು ಹಾಸಿಗೆಗೆ ಮಾತ್ರವೇ ಸೀಮಿತವಾಗಿರಲಿ: ನಟಿ ಕಂಗನಾ ರಾಣವತ್

0

ಬಿಟೌನ್ ಕ್ವೀನ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಗಳನ್ನು ಹಾಕುತ್ತಲೆ ಇರುತ್ತಾರೆ. ಕಂಗನಾ ಹಂಚಿಕೊಳ್ಳುವ ಫೋಸ್ಟ್ ಗಳು ಸಾಕಷ್ಟು ವಿವಾದ ಸೃಷ್ಟಿಸುತ್ತವೆ. ಈ ಬಾರಿ ಕಂಗನಾ ಮಾಡಿರುವ ಟ್ವೀಟ್ ಯಾರ ಕುರಿತಾಗಿ ಎಂಬುದನ್ನು ಮಾತ್ರ ಕಂಗನಾ ರಿವೀಲ್ ಮಾಡಿಲ್ಲ

ಕೆಲವು ವಿಚಾರಗಳಲ್ಲಿ ಕಂಗನಾ ರಣಾವತ್ ನೇರ, ದಿಟ್ಟ. ಯಾರಿಗೆ ತಮ್ಮ ಮಾತು ತಲುಪಬೇಕಿತ್ತೋ ಅದನ್ನು ನೇರವಾಗಿಯೇ ತಲುಪಿಸುತ್ತಾರೆ. ಅದರಲ್ಲೂ ಕರಣ್ ಜೋಹಾರ್ ಬಗ್ಗೆ ನೇರವಾಗಿಯೇ ರಣಕಣಕ್ಕೆ ಆಹ್ವಾನಿಸುತ್ತಾರೆ. ಆದರೆ, ಕೆಲವರ ವಿಚಾರದಲ್ಲಿ ಪರೋಕ್ಷವಾಗಿ ವಿಷಯ ಪ್ರಸ್ತಾಪ ಮಾಡುತ್ತಾರೆ. ಹಾಗಾಗಿ ಇವತ್ತು ಬರೆದ ಬೆಡ್, ಹಾಸಿಗೆ, ಲೈಂಗಿಕ ವಿಚಾರ ಯಾರ ಮೇಲಿನ ಪ್ರಸ್ತಾಪ ಎನ್ನುವುದು ಮಾತ್ರ ಕಂಗನಾ ಬರೆದುಕೊಂಡಿಲ್ಲ.

ಹೆಣ್ಣು, ಗಂಡು ತಾರತಮ್ಯದ ಬಗ್ಗೆಯೂ ಮಾತನಾಡಿರುವ ನಟಿ, ನಮ್ಮ ವೃತ್ತಿಯ ಮೇಲೆಯೇ ನಮ್ಮ ಐಡೆಂಟಿಟಿ ನಿರ್ಧಾರವಾಗುತ್ತದೆ. ಯಾರೂ ಈಗ ನಟಿ, ನಿರ್ದೇಶಕಿ ಎಂದು ಕರೆಯುವುದಿಲ್ಲ. ಕಲಾವಿದರು ಮತ್ತು ನಿರ್ದೇಶಕರು ಎನ್ನುತ್ತಾರೆ. ಜಗತ್ತು ನೀವು ಏನು ಮಾಡುತ್ತೀರಿ ಎನ್ನುವುದರ ಮೇಲೆ ನಿಮ್ಮನ್ನು ನಿರ್ಧರಿಸುತ್ತದೆ ಹೊರತು, ನೀವು ಬೆಡ್ ಮೇಲೆ ಏನು ಮಾಡಿದ್ದೀರಿ ಎನ್ನುವುದರ ಮೇಲಲ್ಲ’ ಎಂದು ಬರೆದುಕೊಂಡಿದ್ದಾರೆ.

ಲೈಂಗಿಕ ಆದ್ಯತೆಗಳು ಅವು ಕೇವಲ ಹಾಸಿಗೆಗೆ ಮಾತ್ರ ಸೀಮಿತವಾಗಿರಲಿ. ಅದೇ ನಿಮ್ಮ ಗುರುತಾಗಬಾರದು ಎಂದು ಮಾರ್ಮಿಕವಾಗಿ ಕಂಗನಾ ಬರೆದುಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed