ನಟಿ ತಮಿಷಾಗೆ ಅಸಭ್ಯ ಸಂದೇಶ ಕಳಿಸಿದ ರಾಜಾಹುಲಿ ಖ್ಯಾತಿಯ ನಟ ಹರ್ಷ: ಆರೋಪ

0

ಶ್ ನಟನೆಯ ರಾಜಾಹುಲಿ ಸಿನಿಮಾದಲ್ಲಿ ಯಶ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದ ಹರ್ಷ ತಮಗೆ ಅಸಭ್ಯವಾಗಿ ಸಂದೇಶ ಕಳಿಸಿದ್ದಾರೆ ಎಂದು ಪೆಂಟಗನ್ ಸಿನಿಮಾದ ನಟಿ ತನಿಷಾ ಕುಪ್ಪಂಡ ಆರೋಪಿಸಿದ್ದಾರೆ.

ತಾವು ಇನ್​ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಬರೆದುಕೊಂಡಿದ್ದೆ.

ಅದಕ್ಕೆ ರಿಪ್ಲೈ ಮಾಡಿರುವ ಹರ್ಷ, ನೀಲಿ ಚಿತ್ರಗಳಲ್ಲಿ ನಟಿಸುತ್ತೀಯ? ಎಂದು ಸ್ಮೈಲಿ ಇಮೇಜಿನೊಂದಿಗೆ ಸಂದೇಶ ಕಳಿಸಿದ್ದಾನೆ ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾರೆ.

ಪೆಂಟಗನ್ ಸಿನಿಮಾದ ಸಂದರ್ಶನಕ್ಕೆಂದು ಬಂದ ಯೂಟ್ಯೂಬರ್ ತನಿಷಾ ಅವರಿಗೆ ನೀವು ಅಶ್ಲೀಲ ಸಿನಿಮಾಗಳಲ್ಲಿ ನಟಿಸಲು ಸಿದ್ದರಿದ್ದೀರಾ ಎಂದು ಅಸಭ್ಯ ಪ್ರಶ್ನೆ ಕೇಳಿದ್ದರು. ಇದನ್ನು ಪ್ರತಿಭಟಿಸಿದ್ದ ನಟಿ ಯೂಟ್ಯೂಬರ್ ವಿರುದ್ಧ ದೂರು ನೀಡಿದ್ದು, ಆ ವಿಷಯವಾಗಿ ಮಾತನಾಡಲು ನಟಿ ಸುದ್ದಿಗೋಷ್ಠಿ ಕರೆದಿದ್ದರು.

ಯೂಟ್ಯೂಬರ್ ಮಾಡಿದ ಕೃತ್ಯದಿಂದ ತಮಗೆ ಆಗಿರುವ ನೋವಿನ ಬಗ್ಗೆ ಮಾತನಾಡುತ್ತಾ, ಅವನಾದರೂ ಹೊರಗಿನವರು, ಅವನಿಂದಾಗಿ ಈಗ ನಮ್ಮವರೇ ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ಸಹನಟನೇ ಒಬ್ಬ ನನ್ನನ್ನು ಬ್ಲೂ ಫಿಲಂನಲ್ಲಿ ನಟಿಸುತ್ತೀಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.

ಯಾರು ಹಾಗೆ ಮೆಸೇಜ್ ಮಾಡಿದ್ದು ಹೆಸರು ಹೇಳಿ ಎಂದಾಗ, ಮೊದಲಿಗೆ, ಆತ ಗುರುದೇಶಪಾಂಡೆ ಸಿನಿಮಾದಲ್ಲಿ ನಟಿಸಿದ್ದಾನೆ ಎಂದಷ್ಟೆ ಹೇಳಿದರು, ಬಳಿಕ ಪತ್ರಕರ್ತರು ಒತ್ತಾಯ ಮಾಡಿದಾಗ ಹರ್ಷ ಹೆಸರು ಹೇಳಿದರು ನಟಿ ತನಿಷಾ. ಇನ್​ಸ್ಟಾಗ್ರಾಂನಲ್ಲಿ ನಾನು ಹಾಕಿದ್ದ ಸ್ಟೋರಿಗೆ ಪ್ರತಿಕ್ರಿಯೆ ನೀಡಿ, ಬ್ಲೂ ಫಿಲಂನಲ್ಲಿ ನಟಿಸಿದ್ದೀಯ ಎಂದು ಮೆಸೇಜ್ ಮಾಡಿದ್ದಾನೆ, ಅದಕ್ಕೆ ಸ್ಮೈಲಿ ಇಮೇಜು ಬೇರೆ ಹಾಕಿದ್ದಾನೆ. ನಾನು ಗೆಳೆಯರು ಎಂದುಕೊಂಡವರೇ ಹೀಗೆ ಕೀಳಾಗಿ ನೋಡುತ್ತಿದ್ದಾರೆ ಎಂದು ಭಾವುಕರಾದರು.

About Author

Leave a Reply

Your email address will not be published. Required fields are marked *

You may have missed