ಹೈದರಾಬಾದ್ನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟಿ ಸಮಂತಾ

0

ಸೌತ್ ಬ್ಯೂಟಿ ಸಮಂತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾಕಷ್ಟು ವಿದದ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಈ ಮಧ್ಯೆಯೂ ಸಮಂತಾ ಸಿನಿಮಾಗಳ ಕೆಲಸದಲ್ಲಿ ತೊಡಗಿಕೊಂಡಿದ್ದು ಹಿಂದಿ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ. ಈಗಾಗಲೇ ಹೈದರಾಬಾದ್ ನಲ್ಲಿ ದುಬಾರಿ ಮನೆ ಹೊಂದಿರುವ ಸ್ಯಾಮ್ ಇದೀಗ ಮತ್ತೊಂದು ಐಷಾರಾಮಿ ಮನೆ ಖರೀದಿಸಿದ್ದಾರೆ.

 

ಸಮಂತಾ- ನಾಗ ಚೈತನ್ಯ ಡಿವೋರ್ಸ್ ಬಳಿಕ ಇಬ್ಬರೂ ಕೆರಿಯರ್ ಕಡೆ ಗಮನ ವಹಿಸುತ್ತಿದ್ದಾರೆ. ಇಬ್ಬರೂ ಮೂವ್ ಆನ್ ಆಗಿ ಹೆಚ್ಚೆಚ್ಚು ಸಿನಿಮಾಗಳನ್ನ ಮಾಡುತ್ತಾ ನೋವನ್ನ ಮರೆಯುತ್ತಿದ್ದಾರೆ. ಇನ್ನೂ ಡಿವೋರ್ಸ್ ಮೊದಲು ಸಮಂತಾ- ನಾಗ ಚೈತನ್ಯ ಒಟ್ಟಿಗೆ ವಾಸವಿದ್ದ ಅದೇ ಐಶಾರಾಮಿ ಮನೆಯನ್ನು ಡಿವೋರ್ಸ್ ಬಳಿಕ ಹಠಕ್ಕೆ ಬಿದ್ದು ನಟಿ ಸಮಂತಾ ಖರೀದಿ ಮಾಡಿ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಹೈದರಾಬಾದ್‌ನ ಐಶಾರಾಮಿ ಏರಿಯಾ ಒಂದರಲ್ಲಿ ಡ್ಯೂಪ್ಲೆಕ್ಸ್ ಮನೆಯನ್ನು ಭಾರಿ ದುಬಾರಿ ಬೆಲೆಗೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.

7944 ಚದರ ಅಡಿ ವಿಸ್ತೀರ್ಣದ ನಾಲ್ಕು ಬೆಡ್‌ರೂಂಗಳುಳ್ಳ ಡ್ಯೂಪ್ಲೆಕ್ಸ್ ಮನೆಯನ್ನು ಸಮಂತಾ ಖರೀದಿ ಮಾಡಿದ್ದಾರೆ ಹೇಳಲಾಗುತ್ತಿದೆ. ಹೈದರಾಬಾದ್‌ನ ದುಬಾರಿ ಏರಿಯಾದ ಐಶಾರಾಮಿ ಅಪಾರ್ಟ್‌ಮೆಂಟ್ ಒಂದರ 14ನೇ ಅಂತಸ್ತಿನಲ್ಲಿ ಈ ಡ್ಯೂಪ್ಲೆಕ್ಸ್ ಮನೆ ಇದೆಯಂತೆ. ಈ ಡ್ಯೂಪ್ಲೆಕ್ಸ್ ಮನೆಗೆ ಸಮಂತಾ 7.8 ಕೋಟಿ ರುಪಾಯಿ ಹಣ ತೆತ್ತಿರುವುದಾಗಿ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಸಮಂತಾ ಪ್ರಸ್ತುತ ಹೈದರಾಬಾದ್‌ನ ಪಲಾಟಿಯಾಲ್ ಹೌಸ್‌ನಲ್ಲಿ ನೆಲೆಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed