ರಾಜಕೀಯ ಎಂಟ್ರಿ ಕುರಿತು ನಟ ರಮೇಶ್ ಅರವಿಂದ್ ಸ್ಪಷ್ಟನೆ

0

ನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಸದ್ಯ ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಸೂಪರ್ ಹಿಟ್ ಆಗಿದ್ದು ಇದರ ಜೊತೆಗೆ ಸ್ಮಾಲ್ ಸ್ಕ್ರೀನ್ ನಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಿರೂಪಣೆಯನ್ನೂ ಮಾಡುತ್ತಿದ್ದಾರೆ.

ಈ ಮಧ್ಯೆ ರಮೇಶ್ ಅರವಿಂದ್ ರಾಜಕೀಯಕ್ಕೆ ಬರುತ್ತಾರಾ ಎಂಬ ಮಾತಿಗೆ ನಟ ಸ್ಪಷ್ಟನೆ ನೀಡಿದ್ದಾರೆ.

ನಟ, ನಿರ್ದೇಶಕ, ನಿರ್ಮಾಪಕ ಹಾಗೂ ನಿರೂಪಕನಾಗಿ ಗುರುತಿಸಿಕೊಂಡಿರುವ ರಮೇಶ್ ಅರವಿಂದ್ ಯಾವಾಗಲೂ ವಿಭಿನ್ನ ಸಿನಿಮಾಗಳ ಮೂಲಕ ಖ್ಯಾತಿ ಘಳಿಸಿದ್ದಾರೆ. ತಮ್ಮ ಮುಂದಿನ ನಡೆ ಸಿನಿಮಾ- ರಾಜಕೀಯ ಎಂಟ್ರಿ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ವೀಕೆಂಡ್ ವಿತ್ ರಮೇಶ್ ಶೋ ಮುಗಿದ ಬಳಿಕ ಹೊಸ ಸಿನಿಮಾ ಮಾಡುತ್ತೇನೆ. ಕರೋನಾ ಸಮಯದಲ್ಲಿ ಮೂರು ಕಥೆಗಳನ್ನ ಮಾಡಿಕೊಂಡಿದ್ದೇನೆ. ಅವುಗಳಲ್ಲಿ ಒಂದು ಕಥೆಯನ್ನ ಪ್ರಾರಂಭಿಸುವ ಆಲೋಚನೆಯಿದೆ ಎಂದು ರಮೇಶ್ ಹೇಳಿದ್ದಾರೆ.

ಇದೀಗ ಚುನಾವಣೆ ಕಣ ಜೋರಾಗಿರುವ ಕಾರಣ, ಸ್ಟಾರ್ ನಟ- ನಟಿಯರು ಪಕ್ಷಗಳ ಪರ ಪ್ರಚಾರ ಮಾಡ್ತಿದ್ದಾರೆ. ಹಾಗಾಗಿ ಪಾಲಿಟಿಕ್ಸ್ ಎಂಟ್ರಿ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಪ್ರಚಾರಕ್ಕೆ ಬನ್ನಿ ಅಂತ ಹಲವರು ಕರೆದರು. ಆದರೆ, ಹೋಗಲಿಲ್ಲ. ನಾನು ರಾಜಕೀಯಕ್ಕೆ ತಲೆ ಹಾಕುವುದಿಲ್ಲ. ಬದಲಾಗಿ ತಟಸ್ಥನಾಗಿರಲು ಬಯಸುತ್ತೇನೆ. ಎಲ್ಲರೂ ನನಗೆ ಗೆಳೆಯರೇ, ಎಲ್ಲಾ ಪಕ್ಷದಲ್ಲೂ ಗೆಳೆಯರಿದ್ದಾರೆ. ನನ್ನ ಮಗಳ ಮದುವೆಗೆ ಆ ಪಕ್ಷ, ಈ ಪಕ್ಷ ಅಂತ ನೋಡದೇ ಎಲ್ಲ ಪಕ್ಷದ ನಾಯಕರೂ ಬಂದಿದ್ದರು ಎಂದು ಮಾತನಾಡಿದ್ದಾರೆ. ಈ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed