ಐರನ್ ಲೆಗ್ ಎಂದವರಿಗೆ ತಿರುಗೇಟು ನೀಡಲು ರೆಡಿಯಾದ ಶ್ರುತಿ ಹಾಸನ್

0

ಹುಭಾಷಾ ನಟನ, ಸೂಪರ್ ಸ್ಟಾರ್ ಕಮಲ್ ಹಾಸನ್ ಪುತ್ರ ಶ್ರುತಿ ಹಾಸನ್ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಸಾಕಷ್ಟು ವರ್ಷಗಳೇ ಕಳೆದಿದೆ. ಸ್ಟಾರ್ ನಟನ ಮಗಳಾಗಿದ್ರು ಶ್ರುತಿ ಹಾಸನ್ ಗೆ ಹೇಳಿಕೊಳ್ಳುವಂತ ಹಿಟ್ ಸಿಕ್ಕಿರಲಿಲ್ಲ. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಾಕಷ್ಟು ವರ್ಷಗಳ ಕಾಲ ಐರೆನ್ ಲೆಗ್ ಎಂದು ಶ್ರುತಿ ಹಾಸನ್ ಅವರನ್ನು ಸಾಕಷ್ಟು ಮಂದಿ ಹಂಗಿಸಿದ್ದರು.

ಇದೀಗ ಮತ್ತೆ ಶ್ರುತಿ ಹಾಸನ್ ಅಬ್ಬರ ಶುರುವಾಗಿದ್ದು, ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.

ತಮಿಳಿನ ಹೇ ರಾಮ್ ಸಿನಿಮಾದ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶ್ರುತಿ ಹಾಸನ್ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ರು. ಆದರೆ ಶ್ರುತಿ ಹಾಸನ್ ಹೆಚ್ಚೆಚ್ಚು ಸುದ್ದಿಯಾಗಿದ್ದು ಮಾತ್ರ ಲವ್, ಡೇಟಿಂಗ್ ವಿಚಾರಗಳಿಂದಲೇ. ಇದೀಗ ಶ್ರುತಿ ಹಾಸನ್ ಮತ್ತೆ ಸಿನಿಮಾ ರಂಗದಲ್ಲಿ ಸೌಂಡ್ ಮಾಡಲು ರೆಡಿಯಾಗಿದ್ದಾರೆ.

ಗ್ಯಾಪ್ ಬಳಿಕ ಶ್ರುತಿ ಹಾಸನ್, ರವಿತೇಜಾ ಜೊತೆ ಕ್ರ್ಯಾಕ್, ಪವನ್ ಕಲ್ಯಾಣ್ ಜೊತೆ ‘ವಕೀಲ್ ಸಾಬ್’ ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಈ ವರ್ಷ ‘ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಯ್ಯ ಜೊತೆ ಶ್ರುತಿ ನಟಿಸಿದ್ದರು. ‘ವಾಲ್ತೇರು ವೀರಯ್ಯ’ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ನಟಿಸಿದ್ದರು.

ಈ ವರ್ಷ ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಐರೆನ್ ಲೆಗ್ ಎಂಬ ಟೀಕೆಗೆ ತನ್ನ ಸಕ್ಸಸ್‌ನಿಂದ ಖಡಕ್ ಉತ್ತರ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್‌ʼನಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed