ಆಲಿಯಾ ಭಟ್ ನಟನೆಯ ಮೊದಲ ಹಾಲಿವುಡ್ ಚಿತ್ರದ ಟ್ರೈಲರ್ ರಿಲೀಸ್

0

ಬಾಲಿವುಡ್ ಬ್ಯೂಟಿ ನಟಿ ಆಲಿಯಾ ಭಟ್ ಈಗಾಗ್ಲೆ ಹಾಲಿವುಡ್ ಗೆ ಎಂಟ್ರಿಕೊಟ್ಟು ದೊಡ್ಡ ಮಟ್ಟಿಗೆ ಸದ್ದು ಮಾಡ್ತಿದ್ದಾರೆ. ಸದ್ಯ ಆಲಿಯಾ ನಟನೆಯ ಮೊದಲ ಹಾಲಿವುಡ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದೆ.

ಹಾಲಿವುಡ್ ನ ‘ಹಾರ್ಟ್ ಆಫ್ ಸ್ಟೋನ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ನಿನ್ನೆ ಅದ್ದೂರಿಯಾಗಿ ಟ್ರೈಲರ್ ರಿಲೀಸ್ ಆಗಿದೆ. ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳು ಇರುವುದು ಟ್ರೈಲರ್ ನಿಂದ ಗೊತ್ತಾಗಿದೆ.

ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಆಲಿ ಹಸಿರು ಬಣ್ಣದ ಡ್ರೆಸ್ ನಲ್ಲಿ ಬಂದಿದ್ದರು. ಮತ್ತು ಸಖತ್ ಗ್ಲಾಮರ್ ಆಗಿಯೂ ಅವರು ಕಾಣುತ್ತಿದ್ದರು. ಈ ಸಿನಿಮಾದಲ್ಲಿ ಆಲಿಯಾ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ವಿಲನ್ ರೀತಿಯ ಪಾತ್ರ ಅದಾಗಿದೆ ಎಂದು ಹೇಳಲಾಗುತ್ತಿದೆ.

ಹಾರ್ಟ್ ಆಫ್ ಸ್ಟೋನ್ ಸಿನಿಮಾ ಆಗಸ್ಟ್ 11 ರಿಂದ ನೆಟ್ ಫ್ಲಿಕ್ಸ್ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಟಾಮ್ ಹಾರ್ಪರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಗಾಲ್ ಗಡೋಟ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed