‘ಗರಡಿ’ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ ನಟಿ ನಿಶ್ವಿಕಾ ನಾಯ್ಡು

0

ಟನೆಯ ಜೊತೆಗೆ ನಟಿ ನಿಶ್ವಿಕಾ ನಾಯ್ಡು ಡ್ಯಾನ್ಸಿಂಗ್ ನಲ್ಲಿ ಎತ್ತಿದ ಕೈ ಅನ್ನೋದು ಪ್ರತಿಯೊಬ್ಬರಿಗು ಗೊತ್ತೆ ಇದೆ. ಸದ್ಯ ನಿಶ್ವಿಕಾ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದ ವಿಶೇಷ ಹಾಡೊಂದರಲ್ಲಿ ಬಿಂದಾಸ್ ಆಗಿದ್ದು ಸ್ಟೆಪ್ ಹಾಕಿದ್ದು ಸದ್ಯ ಆ ಹಾಡು ಇದೀಗ ರಿಲೀಸ್ ಆಗಿದೆ.

ನಿರ್ದಶಕ ಯೋಗರಾಜ್​ ಭಟ್ ಬರೆದ ‘ಹೊಡಿರೆಲೆ ಹಲಗಿ..’ ಹಾಡು ಇಂದು ಬಿಡುಗಡೆ ಆಗಿದೆ. ಈ ಲಿರಿಕಲ್​ ವಿಡಿಯೋದಲ್ಲಿ ಒಂದಷ್ಟು ಡ್ಯಾನ್ಸ್​ ಸ್ಟೆಪ್​ಗಳ ಝಲಕ್​ ತೋರಿಸಲಾಗಿದ್ದು, ಜೊತೆಗೆ ಮೇಕಿಂಗ್​ ವಿಡಿಯೋ ಕೂಡ ಇದೆ.

ಕೊರಿಯೋಗ್ರಾಫರ್ ಎ. ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ನಿಶ್ವಿಕಾ ನಾಯ್ಡು ಸಖತ್​ ಆಗಿ ಕುಣಿದಿದ್ದಾರೆ. ನಿಶ್ಚಿಕಾ ಡ್ಯಾನ್ಸ್ ನೋಡಿ ಪಡ್ಡೆಗಳಿಗೆ ಕಿಕ್​ ಏರುವಂತಿದೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನದಲ್ಲಿ ‘ಹೊಡಿರೆಲೆ ಹಲಗಿ..’ ಸಾಂಗ್​ ಮೂಡಿಬಂದಿದೆ. ಮೇಘನಾ ಹಳಿಯಾಳ್​ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ. ‘ಸರೆಗಮಾ ಕನ್ನಡ’ ಮೂಲಕ ಈ ಹಾಡು ಬಿಡುಗಡೆ ಆಗಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್​ ಭಟ್​ ಅವರು ಈ ಸಾಂಗ್ ಬರೆದಿದ್ದು, ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್​ಗಳಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ.

‘ಸೌಮ್ಯ ಫಿಲ್ಮ್ಸ್​’ ಮತ್ತು​ ‘ಕೌರವ ಪ್ರೊಡಕ್ಷನ್​ ಹೌಸ್​​’ ಮೂಲಕ ‘ಗರಡಿ’ ಸಿನಿಮಾ ಸಿದ್ಧವಾಗುತ್ತಿದೆ. ಬಿಸಿ ಪಾಟೀಲ್​ ಅವರ ಪತ್ನಿ ವಜನಾ ಪಾಟೀಲ್​ ಈ ಚಿತ್ರದ ನಿರ್ಮಾಪಕರು. ಸೂರ್ಯ, ಬಿಸಿ ಪಾಟೀಲ್​, ಸೋನಲ್ ಮಾಂಥೆರೋ, ಧರ್ಮಣ್ಣ ಕಡೂರು, ಪೃಥ್ವಿ ಶಾಮನೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಅವರನ್ನು ಡ್ಯಾನ್ಸಿಂಗ್​ ಡಾನ್​ ಎಂದು ಚಿತ್ರತಂಡದವರು ಹೊಗಳಿದ್ದಾರೆ. ‘ನಿಶ್ವಿಕಾ ಅವರು ಅದ್ಭುತ ನೃತ್ಯಗಾರ್ತಿ’ ಎಂದು ಯೋಗರಾಜ್​ ಭಟ್​ ಹೇಳಿದ್ದಾರೆ.

‘ನಾನು 7ನೇ ತರಗತಿಯಲ್ಲಿ ಇದ್ದಾಗ ಒಂದು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದೆ. ಆ ಶೋಗೆ ಗೆಸ್ಟ್​ ಆಗಿ ಬಿ.ಸಿ. ಪಾಟೀಲ್​ ಬಂದಿದ್ದರು. ಇದೇ ಥರ ಟ್ಯಾಲೆಂಟ್​ ಮುಂದುವರಿಸಿದ್ರೆ ನೀನು ಹೀರೋಯಿನ್​ ಆಗುತ್ತೀಯ ಅಂತ ಅವರು ಅಂದು ನನಗೆ ಹೇಳಿದ್ದರು. ಇಂದು ಅವರ ಸಂಸ್ಥೆಯ ಸಿನಿಮಾದಲ್ಲಿ ನಾನು ಒಂದು ಸಾಂಗ್​ಗೆ ಡ್ಯಾನ್ಸ್ ಮಾಡಿದ್ದು ಖುಷಿ ಆಯ್ತು. ನನಗೆ ಡ್ಯಾನ್ಸ್​ ಎಂದರೆ ತುಂಬ ಇಷ್ಟ. ನನಗೆ ಬೇಕಾದಂತಹ ಸೂಕ್ತ ಅವಕಾಶ ಇದಾಗಿತ್ತು. ಈ ಸಾಂಗ್​ ಯಾವಾಗ ರಿಲೀಸ್​ ಆಗತ್ತೋ ಅಂಥ ನಾನು ಕಾಯುತ್ತಿದ್ದೆ. ಯೋಗರಾಜ್​ ಭಟ್​ ಅವರ ಜೊತೆ ನಾನು ಮೂರು ಸಿನಿಮಾ ಮಾಡಿದ್ದೇನೆ’ ಎಂದು ಸಾಂಗ್​ ರಿಲೀಸ್​ ಕಾರ್ಯಕ್ರಮದ ವೇದಿಕೆಯಲ್ಲಿ ನಿಶ್ವಿಕಾ ನಾಯ್ಡು ಖುಷಿ ಹಂಚಿಕೊಂಡರು.

About Author

Leave a Reply

Your email address will not be published. Required fields are marked *

You may have missed