ಆಂಟಿ ಎಂದರೆ ಕೇಸ್ ಹಾಕ್ತೀನಿ: ಎಚ್ಚರಿಕೆ ನೀಡಿದ ನಟಿ ಅನಸೂಯ

0

ತೆಲುಗು ಚಿತ್ರರಂಗದ ನಟಿ ಹಾಗೂ ನಿರೂಪಕಿ ಅನಸೂಯ ಭಾರದ್ವಾಜ್ ಸದಾ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೆ ಇರುತ್ತಾರೆ. ಸೋಷಿಯಲ್ ಮೀಡಿಯಾದ ಸಖತ್ ಆಕ್ಟೀವ್ ಆಗಿರುವ ಅನಸೂಯ ಇದೀಗ ಟ್ರೋಲಿಗರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅನಸೂಯ ಭಾರದ್ವಾಜ್ ಪೋಸ್ಟ್ ಮಾಡುವ ಫೋಟೋಗಳಿಗೆ ಕೆಲ ದಿನಗಳಿಂದ ನೆಗೆಟಿವ್ ಕಾಮೆಂಟ್ ಬರುತ್ತಿವೆ.

ಅದರಲ್ಲೂ ಕೆಲವರು ‘ಆಂಟಿ’ ನಟಿಯನ್ನು ಕರೆಯುತ್ತಿದ್ದಾರೆ. ತಮಗೆ ಆಂಟಿ ಎಂಬ ಪದ ಬಳಸಿದಕ್ಕೆ ಅನಸೂಯ ಭಾರದ್ವಾಜ್ ಗರಂ ಆಗಿದ್ದಾರೆ. ಈ ಪದವನ್ನು ಹೇಳುವುದರ ಹಿಂದಿನ ಉದ್ದೇಶದ ಬಗ್ಗೆ ಅವರು ಮಾತನಾಡಿದ್ದು, ಈ ರೀತಿಯಲ್ಲಿ ಕರೆದರೆ ಕೇಸ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಆಂಟಿ ಎಂಬ ಪದವು ಕಿರುಕುಳದ ವ್ಯಾಪ್ತಿಗೆ ಬರುತ್ತದೆ. ಆ ರೀತಿಯಲ್ಲಿ ಕಾಮೆಂಟ್ ಮಾಡುವವರಿಗೆ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತೇನೆ. ನೀವು ಹಾಗೆ ಕರೆಯುವುದರ ಹಿಂದಿನ ಉದ್ದೇಶವನ್ನು ನಾನು ಬಲ್ಲೆ. ಹಾಗಾಗಿ ಎಚ್ಚರಿಕೆಯಿಂದ ಕಾಮೆಂಟ್ ಮಾಡಿ ಎಂದು ಹೇಳಿದ್ದಾರೆ. ಯಾರಿಗೂ ಆಂಟಿ ಅಂತ ಕರೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಅನಸೂಯ ಖಡಕ್ ಎಚ್ಚರಿಕೆ ನೀಡಿದರು ಟ್ರೋಲಿಗರು ಕ್ಯೂರೆ ಎನ್ನತ್ತಿಲ್ಲ. ಕೆಲವರು ನಟಿ ಈ ರೀತಿ ಹೇಳಿದ ಮೇಲೆ ಇನ್ನೂ ಜಾಸ್ತಿ ಕೀಟಲೆ ಮಾಡುತ್ತಿದ್ದಾರೆ. ಬೇಕು ಅಂತಾನೇ ಅನಸೂಯ ಅವರ ಫೋಟೋಗಳನ್ನು ಹುಡುಕಿ ಆಂಟಿ ಎಂದು ಬರೆದು ಪೋಸ್ಟ್ ಮಾಡುತ್ತಿದ್ದಾರೆ. ಈ ಎಲ್ಲ ನಡೆಯನ್ನೂ ತಾವು ಗಂಭೀರವಾಗಿ ತಗೆದುಕೊಳ್ಳುವುದಾಗಿ ಅನಸೂಯ ಎಚ್ಚರಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed