ನಟಿ ನಗ್ಮಾ ಜೊತೆ ಯಾವುದೇ ಸಂಬಂಧ ಹೊಂದಿಲ್ಲ: ನಟ ರವಿಕಿಶನ್ ಸ್ಪಷ್ಟನೆ

0

ಹುಭಾಷ ನಟಿ, ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿರುವ ನಗ್ಮಾ ಜೊತೆ ನಟ ರವಿಕಿಶನ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಾಕ್ಷಿ ನೀಡುವಂತೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಅನೇಕ ಫೋಟೋಗಳು ವೈರಲ್ ಆಗಿದ್ದವು. ಈ ಜೋಡಿಯ ಬಗ್ಗೆ ನಾನಾ ರೀತಿಯ ಗಾಸಿಪ್ ಗಳು ಹರಡಿದ್ದು ಈ ಬಗ್ಗೆ ಇದೀಗ ನಟ ರವಿಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ.

 

ಈ ಬಗ್ಗೆ ಇಬ್ಬರು ಯಾವುದೇ ಸ್ಪಷ್ಟನೆ ನೀಡದ ಕಾರಣ ಈ ಸುದ್ದಿ ನಿಜ ಎಂದೇ ಎಂದು ಹೇಳಲಾಗಿತ್ತು. ಈ ಕುರಿತು ಕೊನೆಗೂ ನಟ ರವಿಕಿಶನ್ ಮೌನ ಮುರಿದಿದ್ದಾರೆ. ‘ನಾನು ಮತ್ತು ನಗ್ಮಾ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಈ ಕಾರಣದಿಂದಾಗಿ ಬಹುಶಃ ಆ ಸುದ್ದಿ ಹಬ್ಬಿರಬಹುದು. ನಾನು ಮದುವೆಯಾಗಿದ್ದೇನೆ. ನನ್ನ ಹೆಂಡತಿಯ ಜೊತೆ ಖುಷಿಯಾಗಿ ಇದ್ದೇನೆ. ಆರಾಧಿಸುವಂತಹ ಹೆಂಡತಿ ಇರುವಾಗ ನಾನು ಯಾಕೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳಲಿ. ಅದೆಲ್ಲವೂ ಸುಳ್ಳು ಸುದ್ದಿ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್’ ಎಂದಿದ್ದಾರೆ ರವಿಕಿಶನ್.

‘ನನ್ನ ಹೆಂಡತಿ ಕಷ್ಟದ ಕಾಲದಲ್ಲೂ ಇದ್ದಾಳೆ, ಸುಖದಲ್ಲೂ ಜೊತೆಯಿದ್ದಾಳೆ. ನಾನು ಏನು ಅನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿದೆ. ಅಂತಹ ಹೆಂಡತಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ. ನಗ್ಮಾ ವಿಚಾರದಲ್ಲಿ ನನ್ನ ಪತ್ನಿ ತಲೆಕೆಡಿಸಿಕೊಂಡಿಲ್ಲ. ನಾನು ಏನು ಎನ್ನುವುದು ಆಕೆಗೆ ಗೊತ್ತಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed