ರವಿಚಂದ್ರನ್ ಗೆ ‘ಜಡ್ಜ್ ಮೆಂಟ್’ ಆಗಿ ಬರ್ತಿದ್ದಾರೆ ನಟಿ ಮೇಘನಾ ಗಾಂವ್ಕರ್

0

ಶಿವಾಜಿ ಸುರತ್ಕಲ್ 2 ಸಿನಿಮಾದ ಗೆಲುವಿನ ಸಂಭ್ರಮದಲ್ಲಿರುವ ನಟಿ ಮೇಘನಾ ಗಾಂವ್ಕರ್ (Meghana Gaonkar), ತಮ್ಮ ಅಭಿಮಾನಿಗಳಿಗೆ ಇದೇ ಹೊತ್ತಲ್ಲಿ ಮತ್ತೊಂದು ಖುಷಿಯ ಸುದ್ದಿ ನೀಡಿದ್ದಾರೆ. ರವಿಚಂದ್ರನ್ (Ravichandran) ನಾಯಕನಾಗಿ ನಟಿಸುತ್ತಿರುವ ‘ದಿ ಜಡ್ಜ್ ಮೆಂಟ್’ (The Judgment) ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಎರಡು ತಲೆಮಾರಿನ ಕಥೆಯನ್ನು ಈ ಸಿನಿಮಾ ಹೊಂದಿದ್ದು, ದಿಗಂತ್ (Digant) ಗೆ ನಾಯಕಿ ಧನ್ಯ ಆಗಿದ್ದರೆ, ರವಿಚಂದ್ರನ್ ಅವರಿಗೆ ಮೇಘನಾ ನಾಯಕಿ.

ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. G9 communication media & Entertainment ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರುರಾಜ ಬಿ ಕುಲಕರ್ಣಿ(ನಾಡಗೌಡ) (Gururaja Kulkarni) ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಆಕ್ಸಿಡೆಂಟ್, ಲಾಸ್ಟ್‌ ಬಸ್, ಅಮೃತ ಅಪಾರ್ಟ್‌ಮೆಂಟ್ಸ್ ಚಿತ್ರಗಳನ್ನು ಈ ಸಂಸ್ಥೆ ಮೂಲಕ ನಿರ್ಮಿಸಲಾಗಿತ್ತು ಹಾಗೂ ಈ ಚಿತ್ರಗಳನ್ನು ಗುರುರಾಜ್ ಬಿ ಕುಲಕರ್ಣಿ ಅವರೆ ನಿರ್ದೇಶಿಸಿದ್ದರು. ಸಂಸ್ಥೆಯ ನಾಲ್ಕನೇ ಚಿತ್ರವಾಗಿ ದ ಜಡ್ಜ್ ಮೆಂಟ್ ಚಿತ್ರ ನಿರ್ಮಾಣವಾಗುತ್ತಿದೆ.

About Author

Leave a Reply

Your email address will not be published. Required fields are marked *

You may have missed