ಬಿಗ್ ಬಾಸ್ ಮನೆಗೆ ನವಾಜುದ್ದೀನ್ ಸಿದ್ಧಿಕಿ ಮಾಜಿ ಪತ್ನಿ ಆಲಿಯಾ ಎಂಟ್ರಿ

0

ಬಾಲಿವುಡ್​ ನಟ ನವಾಜುದ್ದೀನ್ ಸಿದ್ಧಿಕಿ ಹಾಗೂ ಪತ್ನಿ ಆಲಿಯಾ ಸಿದ್ಧಿಕಿ ನಡುವೆ ಕಿತ್ತಾಟ ಮುಂದುವರೆಯುತ್ತಲೆ ಇದೆ. ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದು ಈ ಮಧ್ಯೆ ಆಲಿಯಾ ಹೊಸ ವ್ಯಕ್ತಿ ಜೊತೆ ಸುತ್ತಾಟ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.ಇದೀಗ ಆಲಿಯಾ ಸಿದ್ದಿಕಿ ಹಿಂದಿಯ ಬಿಗ್ ಬಾಸ್ ಒಟಿಟಿ ಸೀಸನ್ 2ಗೆ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

‘ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ ಸೂಪರ್ ಹಿಟ್ ಆಗಿದ್ದು ಈ ಬೆನ್ನಲ್ಲೇ ಇದೀಗ ಒಟಿಟಿ 2 ಪ್ರಸಾರವಾಗಲಿದೆ. ಈ ಕಾರ್ಯಕ್ರಮ ನೇರವಾಗಿ ಒಟಿಟಿ ಮೂಲಕ ಪ್ರಸಾರವಾಗಲಿದ್ದು, ಸಲ್ಮಾನ್ ಖಾನ್ ಅವರೇ ನಡೆಸಿಕೊಡುತ್ತಿದ್ದಾರೆ. ಈ ಬಾರಿ ವೀಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಟಿಆರ್​ಪಿ ಇರೋ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಪೈಕಿ ಆಲಿಯಾ ಕೂಡ ಇದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಪ್ರೋಮೋ ಒಂದನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಸ್ಪರ್ಧಿಗಳ ಮುಖ ಸ್ಪಷ್ಟವಾಗಿಲ್ಲ. ಆದರೆ, ಇದು ಆಲಿಯಾ ಸಿದ್ಧಿಕಿ ಎಂದು ಹೇಳೋಕೆ ಸಾಕಷ್ಟು ಪುರಾವೆಗಳಿವೆ. ‘ನಾನು ಸ್ಟಾರ್ ನಟನ ಪತ್ನಿ ಎಂದು ಯಾವಾಗಲೂ ಕರೆಯಲ್ಪಟ್ಟಿದ್ದೆ. ಸಂಬಂಧದಲ್ಲಿ ಗೌರವವಿಲ್ಲದಿದ್ದರೆ ಆ ಸಂಬಂಧವು ತಾನಾಗಿಯೇ ದುರ್ಬಲಗೊಳ್ಳುತ್ತದೆ. 19 ವರ್ಷಗಳಲ್ಲಿ ನಾನು ಎದುರಿಸಿದ ಕಷ್ಟಗಳು ನನಗೆ ತಿಳಿದಿದೆ. ಪತಿಯಿಂದ ತೊಂದರೆಗೀಡಾದ ವೈವಾಹಿಕ ಜೀವನದಿಂದ ಹೊರಬರಲು ನಾನು ಬಯಸಿದೆ. ನಾನು ಬಿಗ್ ಬಾಸ್‌ನಲ್ಲಿ ಇರುವುದಕ್ಕೆ ಇದೇ ಕಾರಣ’ ಎಂದು ಮಹಿಳೆ ಒಬ್ಬರು ಹೇಳಿಕೊಂಡಿದ್ದಾರೆ. ಇದು ಆಲಿಯಾ ಎಂದು ಎಲ್ಲರೂ ಭಾವಿಸಿದ್ದಾರೆ.

ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಿಕಿ ಹೊಸ ಹುಡುಗನೊಂದಿಗೆ ಸುತ್ತಾಡುತ್ತಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಹೊಸ ಬಾಯ್​ಫ್ರೆಂಡ್​ ಫೋಟೋ ಹಂಚಿಕೊಂಡಿದ್ದರು. ಅವರ ಈ ನಿರ್ಧಾರ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ನವಾಜುದ್ದೀನ್​ ಸಿದ್ಧಿಕಿ ಮೇಲೆ ಆಲಿಯಾ ಹೊರಿಸಿರುವ ಆರೋಪಗಳು ಒಂದೆರಡಲ್ಲ. ಕೋರ್ಟ್​ನಲ್ಲಿ ಆ ಎಲ್ಲ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಅದರ ನಡುವೆಯೇ ಆಲಿಯಾಗೆ ಬೇರೆ ವ್ಯಕ್ತಿಯ ಜೊತೆ ಪ್ರೀತಿ ಚಿಗುರಿದೆ. ಈ ಬಗ್ಗೆ ಅವರು ಮಾತನಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

About Author

Leave a Reply

Your email address will not be published. Required fields are marked *

You may have missed