ಸಮಂತಾ ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ: ನಾಲಿಗೆ ಹರಿಬಿಟ್ಟ ನಿರ್ಮಾಪಕ ಚಿಟ್ಟಿಬಾಬು

0

ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ಎಷ್ಟೇ ತೊಂದರೆಗಳು ಎದುರಾದರೂ ಯಾವುದಕ್ಕೂ ಅಂಜದೆ ಮುಂದೆ ಸಾಗುತ್ತಿದ್ದಾರೆ. ಸಾಕಷ್ಟು ನೋವುಗಳ ನಡುವೆಯೂ ದಿಟ್ಟ ತನದಿಂದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಿನ್ನೆ ತಾನೆ ಸಮಂತಾ ನಟನೆಯ ಶಾಕುಂತಲಂ ಸಿನಿಮಾ ರಿಲೀಸ್ ಆಗಿದೆ.

ಶಾಕುಂತಲಂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರಕ್ಕೆ ಬರುತ್ತಿರುವ ಕಾಮೆಂಟ್ಸ್‌ನಿಂದಾಗಿ ಖುಷಿಯಲ್ಲಿರುವ ಸಮಂತಾ ಬಗ್ಗೆ ನಿರ್ಮಾಪಕನೊಬ್ಬ ಕಟುವಾಗಿ ಮಾತನಾಡಿದ್ದಾರೆ.

ನಟಿ ಸಮಂತಾಳದ್ದು ಅಜ್ಜಿ ಮುಖ, ಅವಳ ವೃತ್ತಿ ಜೀವನ ಮುಗಿದಿದೆ ಎಂದು ಹೇಳುವ ಮೂಲಕ ನಿರ್ಮಾಪಕ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ತೆಲುಗು ನಿರ್ಮಾಪಕ ಚಿಟ್ಟಿಬಾಬು ಸಮಂತಾ ವಿರುದ್ಧ ಮಾತನಾಡಿದ್ದಾರೆ.

ಶಾಕುಂತಲೆ ಅಪ್ರತಿಮ ಸೌಂದರ್ಯವತಿ, ಆದರೆ ಸಮಂತಾಗೆ ಆ ಪಾತ್ರ ಸೂಟ್‌ ಆಗಲ್ಲ. ಸಮಂತಾ ಮುಖ ಕಿತ್ತುಹೋಗಿದೆ. ಅದಕ್ಕಾಗಿ ಜನರನ್ನು ಸೆಳೆಯಲು ನಾನು ಸತ್ತುಹೋಗುತ್ತೇನೆ ಅದೂ ಇದು ಎಂದು ಹೈ ಡ್ರಾಮಾ ಮಾಡ್ತಿದ್ದಾರೆ. ಈ ಹಿಂದೆ ಯಾವುದೋ ಸಿನಿಮಾಕ್ಕೆ ಬೆಡ್ ಮೇಲೆ ಮಲಗಿ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಇದೆಲ್ಲಾ ಅವರ ಪ್ರಚಾರ ಗಿಮಿಕ್. ಹಿಂದೆ ಹಲವು ಕಲಾವಿದರು ತೀವ್ರ ಜ್ವರದ ನಡುವೆಯೂ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಚಿಟ್ಟಿಬಾಬು ಹೇಳಿದ್ದಾರೆ.

ಸಮಂತಾಗೆ ನಾಯಕಿಯಾಗಿ ನಟಿಸಲು ಆಫರ್ ಬರುತ್ತಿಲ್ಲ. ಅದಕ್ಕೆ ಅವರು ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಕೆಯ ಮುಖ ಅಜ್ಜಿ ಮುಖದಂತೆ ಆಗಿದೆ. ಟಾಪ್ ಹೀರೋಯಿನ್ ಪಟ್ಟದಿಂದ ಸಮಂತಾ ಕೆಳಗೆ ಬಿದ್ದು ಬಹಳ ಸಮಯವಾಗಿದೆ. ಅದಕ್ಕೆ ‘ಪುಷ್ಪ’ ಸಿನಿಮಾದಲ್ಲಿ ಊ ಅಂಟಾವ ಹಾಡಿನಲ್ಲಿ ಅರೆಬೆತ್ತಲೆಯಾಗಿ ಕುಣಿದಿದ್ದಾಳೆ. ಹಣ ಮಾಡಲು, ಚಿತ್ರರಂಗದಲ್ಲಿ ನಿಲ್ಲಲು ಹೀಗೆ ಮಾಡ್ತಿದ್ದಾಳೆ. ಆಕೆಯ ವೃತ್ತಿ ಬದುಕು ಮುಗಿದಿದೆ. ಒಂದು ಸಮಯದಲ್ಲಿ ಒಳ್ಳೆಯ ಸ್ಟಾರ್ ಪಟ್ಟ ಅನುಭವಿಸಿದ್ದಾಳೆ. ಈಗ ಪ್ರತಿ ಸಿನಿಮಾಕ್ಕೂ ಏನೋ ಒಂದು ಡ್ರಾಮಾ ಮಾಡಿಕೊಂಡು, ನಾನು ಸತ್ತುಹೋಗುತ್ತೇನೆ ಎಂದು ಅದು ಇದು ಹೇಳಿ ಡ್ರಾಮಾ ಮಾಡಿಕೊಂಡು ಸಿನಿಮಾ ಗೆಲ್ಲಿಸಿಕೊಳ್ಳಲು ನೋಡುತ್ತಿದ್ದಾಳೆ. ಆದರೆ ಅದೆಲ್ಲ ವರ್ಕೌಟ್ ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ ಇಲ್ಲವಾದರೆ ಇಲ್ಲ. ‘ಶಾಕುಂತಲಂ’ ಸಿನಿಮಾದ ಕತೆಯೂ ಅಷ್ಟೆ. ಆದರೆ ನನಗಿರುವ ಪ್ರಶ್ನೆ ಎಂದರೆ, ಎಲ್ಲಾ ಚಾರ್ಮ್ ಕಳೆದುಕೊಂಡಿರುವ ನಟಿ ಶಾಕುಂತಲಂ ಅಂತಹ ಅಂದಗಾತಿಯ ಪಾತ್ರಕ್ಕೆ ಹೇಗೆ ಸೂಟ್ ಆಗುತ್ತಾಳೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ ಚಿಟ್ಟಿಬಾಬು.

ನಿರ್ಮಾಪಕ ಚಿಟ್ಟಿಬಾಬು ಮಾತುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವಿರೋಧ ವ್ಯಕ್ತವಾಗಿದೆ. ಹಿರಿಯ ನಿರ್ಮಾಪಕನಾಗಿ ನಟಿಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಸರಿಯಲ್ಲ ಎಂದು ಸಾಕಷ್ಟು ಮಂದಿ ಬುದ್ದಿವಾದ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed