ಬಾಲಿವುಡ್ ನಟ ಮಂಗಲ್ ಧಿಲ್ಲೋನ್ ಕ್ಯಾನ್ಸರ್ ನಿಂದ ನಿಧನ

0

ಣಭೂಮಿ, ದಿಲ್ ತೇರಾ ಆಶಿಕ್ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟ ಮಂಗಲ್ ಧಿಲ್ಲೋನ್ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಹಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಂಗಲ್ ಧಿಲ್ಲೋನ್ ಅವರ ಆರೋಗ್ಯ ಇತ್ತೀಚೆಗೆ ಬಿಗಡಾಯಿಸಿದ್ದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ಕಿರುತೆರೆ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಂಗಲ್, ಪ್ಯಾರ್ ಕಾ ದೇವತಾ, ವಿಶ್ವಾತ್ಮ, ಟ್ರೈನ್ ಟು ಪಾಕಿಸ್ತಾನ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 1988ರಲ್ಲಿ ತೆರೆಕಂಡ ಖೋನ್ ಭಾರಿ ಮಾಂಗ್ ಸಿನಿಮಾದಲ್ಲಿ ಮಾಡಿದ್ದ ವಕೀಲ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

ನಟನೆ ಮಾತ್ರವಲ್ಲದೇ, ಬರಹಗಾರನಾಗಿ, ನಿರ್ದೇಶಕನಾಗಿ ಹಾಗೂ ಪಂಜಾಬಿ ಸಿನಿಮಾಗಳ ನಿರ್ಮಾಪಕನಾಗಿಯೂ ಮಂಗಲ್ ಗುರುತಿಸಿಕೊಂಡಿದ್ದರು. ಮಂಗಲ್ ಧಿಲ್ಲೋನ್ ನಿಧನಕ್ಕೆ ಹಲವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್, ನಟ ಯಶ್ ಪಾಲ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed