ತಮನ್ನಾ ತೊಡೆಯ ಮೇಲೆ ತಲೆ ಇಟ್ಟು ಮಲಗಿದ ವಿಜಯ್ ವರ್ಮಾ

0

ಹುಭಾಷಾ ನಟಿ ತಮನ್ನಾ ಭಾಟಿಯಾ ಕಳೆದ ಕೆಲ ದಿನಗಳಿಂದ ಸಿನಿಮಾದ ಜೊತೆ ಜೊತೆಗೆ ಫರ್ಸನಲ್ ವಿಷಯದಲ್ಲೂ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ವಿಜಯ್ ವರ್ಮಾ ಜೊತೆಗಿನ ಲವ್ ಕುರಿತಾಗಿ ಬಾಯಿ ಬಿಟ್ಟಿದ್ದ ನಟಿ ಇದೀಗ ಆತನೊಂದಿಗೆ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ.

ಸದ್ಯ ಬಿಟೌನ್ ನವ ಜೋಡಿ ತಮನ್ನಾ ಹಾಗೂ ವಿಜಯ್ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದು ಈ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಹಿಂದಿ, ಮರಾಠಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿರುವ ನಟಿ ತಮನ್ನಾ ಐಟಂ ಹಾಡಿನಲ್ಲೂ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೂ ತಮನ್ನಾನೇ ನಾಯಕಿಯಾಗ್ಬೇಕು ಅನ್ನೋ ಅಷ್ಟರ ಮಟ್ಟಿಗೆ ಖ್ಯಾತಿ ಘಳಿಸಿರುವ ತಮನ್ನಾ ಇದೀಗ ಸಿನಿಮಾಗಳ ಜೊತೆಗೆ ನಟ ವಿಜಯ್ ವರ್ಮಾ ಜೊತೆಗಿನ ಸುತ್ತಾಟದಿಂದಲು ಸದ್ದು ಮಾಡ್ತಿದ್ದಾರೆ.

ಇತ್ತೀಚಿಗೆ ವಿಜಯ್ ನನ್ನ ಖುಷಿಯ ಖಜಾನೆ ಎಂದಿದ್ದ ತಮನ್ನಾ ಇದೀಗ ಆತನೊಂದಿಗೆ ಭರ್ಜರಿಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ತಮನ್ನ ತೊಡೆಯ ಮೇಲೆ ತಲೆ ಇಟ್ಟು ವಿಜಯ್ ಫೋಟೋಗೆ ಫೋಸ್ ನೀಡಿದ್ದಾರೆ. ಸಾಕಷ್ಟು ಮಂದಿ ಈ ಜೋಡಿಯ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed